ಸಾಹಿತಿ ಭಗವಾನ್ ಗೆ ಮಸಿ, ಸಾಣೆಹಳ್ಳಿ ಪಂಡಿತಾರಾಧ್ಯ ಶ್ರೀಯಿಂದ ಖಂಡನೆ

ಚಿತ್ರದುರ್ಗ: ನ್ಯಾಯಾಲಯದ ವಿಚಾರಣೆಗೆ ಆಗಮಿಸಿದ್ದ ಸಾಹಿತಿ ಕೆ.ಎಸ್.ಭಗವಾನ್ ಅವರ ಮೇಲೆ ವಕೀಲೆಯೊಬ್ಬರು ಮಸಿ ಬಳಿದಿರುವ ಘಟನೆಯನ್ನು ಸಾಣೆಹಳ್ಳಿ ಮಠದ ಪೀಠಾಧ್ಯಕ್ಷರಾದ ಪಂಡಿತಾರಾಧ್ಯ ಸ್ವಾಮೀಜಿ ಅವರು ಖಂಡಿಸಿದ್ದಾರೆ.
ಭಗವಾನ್ ಅವರ ಮೇಲೆ ವಕೀಲೆಯೊಬ್ಬರು ಮಸಿ ಎರೆಚುವ ಮೂಲಕ ಪ್ರಜಾ ಪ್ರಭುತ್ವದ ಕಗ್ಗೊಲೆ ಮಾಡಿದ್ದಾರೆ. ಭಗವಾನ್ ಅವರ ಮೇಲೆ ಮಸಿ ಎರಚಿದ ಆ ತಾಯಿ ತನ್ನ ವೃತ್ತಿ ಗೌರವಕ್ಕೇ ಚ್ಯುತಿ ತಂದುಕೊಂಡಂತೆ ಆಗಿದೆ. ಪ್ರಜಾಪ್ರಭುತ್ವದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲವೆಂದರೆ ಅದನ್ನು ಇನ್ನೆಲ್ಲಿಂದ ತರುವುದು? ಆ ಸಹೋದರಿ ಮಸಿ ಎರಚುವ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದಂತಾಗಿದೆ. ಇಂಥವರ ಮೇಲೆ ಸರ್ಕಾರ ಶಿಸ್ತಿನ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಭಗವಾನರ ವಿಚಾರಗಳು ಒಪ್ಪಿಗೆ ಆಗದಿದ್ದರೆ ಅವರ ವಿಚಾರಗಳನ್ನು ಮಾತು ಮತ್ತು ಬರಹದ ಮೂಲಕ ಪ್ರತಿಭಟಿಸದೆ ಅಡ್ಡದಾರಿ ಹಿಡಿದಿರುವುದು ಅಮಾನವಿಯ ಮತ್ತು ಖಂಡನಾರ್ಹ. ಒಬ್ಬ ವಕೀಲೆಯಾಗಿದ್ದುಕೊಂಡು ಈ ರೀತಿ ಕಾನೂನಿಗೆ ಅಗೌರವ ತರುವ ಕೆಲಸ ಮಾಡಿದ್ದು ಖಂಡನೀಯ ಎಂದರು.