ರಾಜ್ಯದಲ್ಲಿ ಕೊರೊನಾ ಕಡಿಮೆಯಾಗಿದ್ದರಿಂದ ಆನ್ ಲಾಕ್ ಆನ್ ಲಾಕ್ ಪ್ರಕ್ರಿಯೆಯಲ್ಲಿ ಚಿತ್ರಮಂದಿರಗಳ ಆರಂಭಕ್ಕೆ ಅವಕಾಶ ನೀಡಲಾಗಿದ್ದರೂ ಕೊಪ್ಪಳ ಜಿಲ್ಲೆಯಲ್ಲಿ ಚಿತ್ರಮಂದಿರಗಳು ಆರಂಭವಾಗಿಲ್ಲ.
ಮುಂದಿನ ಶುಕ್ರವಾರದಿಂದ ಒಂದೊಂದು ಚಿತ್ರಮಂದಿರಗಳು ಆರಂಭವಾಗಬಹುದು ಎಂದು ಅಂದಾಜಿಸಲಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಈಗ ಒಟ್ಟು 23 ಚಿತ್ರಮಂದಿರಗಳಿವೆ, ಈ ಚಿತ್ರಮಂದಿರಗಳಲ್ಲಿ ಇಂದಿನಿಂದ ಸಿನೇಮಾ ಪ್ರದರ್ಶನವಾಗುತ್ತದೆ ಎಂದು ಕೊಂಡಿದ್ದ ಚಿತ್ರಪ್ರೇಮಿಗಳಿಗೆ ನಿರಾಸೆ ಉಂಟಾಗಿದೆ. ಇಂದು ಜಿಲ್ಲೆಯಲ್ಲಿ ಯಾವುದೇ ಚಿತ್ರಮಂದಿರಗಳು ಆರಂಭವಾಗಿಲ್ಲ. ಕಾರಣ ಈಗ ಹೊಸ ಸಿನಿಮಾಗಳು ಬಿಡುಗಡೆಯಾಗಿಲ್ಲ.
ಚಿತ್ರ ಮಂದಿರಗಳಲ್ಲಿ ಶೇ 50 ರಷ್ಟು ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಇದರಿಂದಾಗಿ ಹೊಸ ಸಿನಿಮಾಗಳು ಆರಂಭವಾಗಿಲ್ಲ. ಈ ಕಾರಣಕ್ಕೆ ಸಿನಿಮಾ ಮಂದಿರಗಳ ಆರಂಭ ವಿಳಂಭವಾಗುತ್ತದೆ. ಸಾಮಾನ್ಯವಾಗಿ ಪ್ರತಿ ಶುಕ್ರವಾರ ಹೊಸ ಸಿನಿಮಾಗಳು ಬಿಡುಗಡೆಯಾಗುತ್ತವೆ. ಆಗಿನಿಂದ ಚಿತ್ರಮಂದಿರಗಳು ಪ್ರದರ್ಶನ ಆರಂಭಿಸುವ ಸಾಧ್ಯತೆ ಇದೆ. ಶುಕ್ರವಾರವು ಸಹ ಎಲ್ಲಾ ಚಿತ್ರಮಂದಿರಗಳು ಆರಂಭವಾಗುವುದು ಅನುಮಾನ ಎನ್ನಲಾಗಿದೆ. ಒಂದೊಂದೆ ಸಿನಿಮಾ ಥೇಟರ್ ಆರಂಭವಾಗಬಹುದು,
ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಮೂರು ತಿಂಗಳಿನಿಂದ ಚಿತ್ರಮಂದಿರಗಳು ಬಂದ್ ಆಗಿವೆ. ಈಗ ಬಿಡುಗಡೆಯಾಗಿರುವ ಸಿನಿಮಾಗಳನ್ನು ಪ್ರದರ್ಶನಕ್ಕೂ ವಿತರಕರಿಂದ ಪರವಾನಿಗೆ ಪಡೆಯಬೇಕು. ಈ ಪರವಾನಿಗೆಗೂ ಸಹ ಕಾಯಬೇಕಾಗಿದೆ. ಈ ಮಧ್ಯೆ ಹಳೆಯ ಸಿನಿಮಾಗಳನ್ನು ಪ್ರದರ್ಶನ ಮಾಡಿದರೆ ಜನ ಬರುವುದು ಅನುಮಾನ ಎಂದು ಥೇಟರ್ ಮಾಲೀಕರು ಹೇಳುತ್ತಾರೆ.
ಲಾಕ್ ಡೌನ್ ನಿಂದಾಗಿ ಚಿತ್ರಮಂದಿರಗಳ ಮಾಲೀಕರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ರಾಜ್ಯ ಸರಕಾರ ತೆರಿಗೆ ವಿನಾಯತಿ ಹಾಗು ವಿದ್ಯುತ್ ಬಿಲ್ಲು ವಿನಾಯಿತಿ ನೀಡುವುದಾಗಿ ಘೋಷಣೆ ಮಾಡಿದೆ, ಈ ಘೋಷಣೆ ಜಾರಿಯಾಗಬೇಕು, ಚಿತ್ರ ಮಂದಿರಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ನೆರವಿಗೆ ಸರಕಾರವು ಬರಬೇಕೆಂದು ಆಗ್ರಹಿಸಿದ್ದಾರೆ.