ಆರೋಗ್ಯ ಸಚಿವರು ತುಂಬಾ ಬುದ್ದಿವಂತರಿದ್ದಾರೆ. ಹಾಗಾಗಿ ನಮಗೆ ಕಷ್ಟ ಆಗಿದೆ ಎಂದು ಕೆ.ಸುಧಾಕರ್ ಅವರನ್ನು ಸಾರ್ವಜನಿಕ ಸಭೆಯಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಲೆಳೆದಿದ್ದಾರೆ.
ಬೆಂಗಳೂರಿನಲ್ಲಿ 101 ಆಂಬುಲೆನ್ ಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುನಿರತ್ನ ಅವರೇ ಎಲ್ಲಿದ್ದಿರಾ? ಎಂದು ಪ್ರಶ್ನಿಸಿದರು. ಈ ವೇಳೆ ಮೊಬೈಲ್ ನಲ್ಲಿ ಮಗ್ನರಾಗಿದ್ದ ಮುನಿರತ್ನ ಗಾಬರಿಗೊಂಡು ನೋಡುತ್ತಿದ್ದಂತೆ, ಬೆಂಗಳೂರು ಸಚಿವರು ಯಾವಾಗ ಎಲ್ಲಿರುತ್ತಾರೆ ಅಂತಾನೇ ಗೊತ್ತಾಗಲ್ಲ ಎಂದಾಗ ಸಭೆಯಲ್ಲಿ ನಗೆ ಉಕ್ಕಿಹರಿಯಿತು.
ಇದೇ ವೇಳೆ ಹಿರಿಯ ಸಚಿವ ಸೋಮಣ್ಣ ಅವರನ್ನು ಹೊಗಳಿದ ಬೊಮ್ಮಾಯಿ, ಸೋಮಣ್ಣ ಅವರ ಕೆಲಸ ನೋಡಿ ಕಲಿಯಬೇಕು. 70 ವರ್ಷ ಆದರೂ 20ರ ಹರೆಯದವರಂತೆ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರು ಸಚಿವರು ಕೂಡ ಇದೇ ರೀತಿ ಪೈಪೋಟಿಯಲ್ಲಿ ಕೆಲಸ ಮಾಡಬೇಕಿದೆ ಎಂದರು.