ತುಮಕೂರು : ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಬಿಜೆಪಿಗೆ ಎಂಜಿನ್ ಇದ್ದಂತೆ. ಅವರ ನಾಯಕತ್ವದ ಬಗ್ಗೆ ಸಚಿವ ಯೋಗೇಶ್ವರ್ ಅವರಿಗೆ ನಂಬಿಕೆ ಇಲ್ಲಾ ಅಂದ್ರೆ ಸಂಪುಟದಿಂದ ಹೊರಹೋಗುವುದೇ ಒಳಿತು ಎಂದು ಬಿಜೆಪಿ ಶಾಸಕ ಜ್ಯೋತಿಗಣೇಶ್ ಹೇಳಿದ್ದಾರೆ.
ಸುದ್ದುಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರು ಜನನಾಯಕರು. ದೇಶದಲ್ಲಿ ಬಿಜೆಪಿ ಮುನ್ನೂರರ ಗಡಿ ದಾಟಲು ನರೇಂದ್ರ ಮೋದಿಯವರು ಹೇಗೆ ಮುಖ್ಯ ಎಂಜಿನ್ನೋ ಹಾಗೆಯೇ ಕರ್ನಾಟಕದಲ್ಲಿ ನೂರರ ಗಡಿ ದಾಟಲು ಮುಖ್ಯಎಂಜಿನ್ ಯಡಿಯೂರಪ್ಪನವರು ಎಂದರು.
ಎಂಜಿನ್ ಇಲ್ಲದೆ ಎಂತ ನಾಯಕರು ಹಿಂದೆ ಕೂತರೂ ಅದು ಸಾಗಲ್ಲ. ಎಲ್ಲರಿಗೂ ಆತ್ಮಸ್ತೈರ್ಯ ಕಳೆಯೋ ಕೆಲಸವನ್ನು ಯೋಗೇಶ್ವರ್ ಮಾಡಬಾರದು. ಯಡಿಯೂರಪ್ಪ ಅವರ ನಾಯಕತ್ವ ಆಸಕ್ತಿ ಇಲ್ಲವಾದ್ರೆ ರಾಜೀನಾಮೆ ಕೊಟ್ಟು ಹೊರ ಹೋಗಬಹುದು ಎಂದು ತಿಳಿಸಿದರು.
ಸಿ.ಎಂ ಯಡಿಯೂರಪ್ಪ ಅವರನ್ನ 2011 ರಿಂದಲೂ ನೋಡಿಕೊಂಡು ಬಂದಿದ್ದೇವೆ. ಅವರ ಶಕ್ತಿ ಏನೆಂಬುದು ನಮಗೆ ಗೊತ್ತಿದೆ. ಯಡಿಯೂರಪ್ಪ ಅವರ ನೆರಳಲ್ಲೇ ಬಿಜೆಪಿ ಸರ್ಕಾರ ಮಾಡಿದ್ದೇವೆ. ಅವರ ಬೆಂಬಲಕ್ಕೆ ನಾವು ಇರುತ್ತೇನೆ ಎಂದರು.