ಕೋಬ್ರಾ ಕಮಾಂಡೋ ಘಟಕಕ್ಕೆಮಹಿಳಾ ತಂಡ ಸೇರ್ಪಡೆ :ನಕ್ಸಲ್ ವಿರೋಧಿ ಕಾರ್ಯಾಚರಣೆಗೆ ಶೀಘ್ರವೇ ನಿಯೋಜನೆ

ನವದೆಹಲಿ: ಸಿ ಆರ್ ಪಿ ಎಫ್ ನ 34 ಮಹಿಳಾ ಸಿಬ್ಬಂದಿ ಇದೇ ಮೊದಲ ಬಾರಿಗೆ ಕೋಬ್ರಾ ಕಮಾಂಡೋ ಘಟಕವನ್ನು ಸೇರ್ಪಡೆಯಾಗಿದೆ. ತುರ್ತು ಪರಿಸ್ಥಿತಿಯ ಕಾರ್ಯಾಚರಣೆ ಸೇರಿದಂತೆ ನಕ್ಸಲ್ ವಿರೋಧಿ ಕಾರ್ಯಾಚರಣೆಗೆ ತಂಡವನ್ನು ನಿಯೋಜಿಸಲಾಗುವುದು ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕೋಬ್ರಾ ಘಟಕದ ಮಹಿಳೆಯರು ಮೂರು ತಿಂಗಳ ಕಾಲ ತರಬೇತಿಯನ್ನು ಪಡೆಯಬೇಕಾಗುತ್ತದೆ. ತರಬೇತಿಯ ನಂತರವಷ್ಟೇ ನಕ್ಸಲ್ ಪೀಡಿತ ಜಿಲ್ಲೆಗಳಲ್ಲಿ ನಿಯೋಜನೆ ಮಾಡಲಾಗುವುದು ಎಂದು ಸಿ ಆರ್ ಪಿ ಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೊದಲ ಮಹಿಳಾ ಬೆಟಾಲಿಯನ್ ನ 35 ನೇ ರೈಸಿಂಗ್ ಡೇ ವರ್ಷಾಚರಣೆಯ ಸಂದರ್ಭದಲ್ಲಿ ದೇಶದ ಅತಿದೊಡ್ಡ ಮಹಿಳಾ ಅರೆಸೇನಾಪಡೆ ಸಹ ಪಾಲ್ಗೊಂಡಿತ್ತು. 1986ರಲ್ಲಿ ದೆಹಲಿಯ ಸಿ ಆರ್ ಪಿ ಎಫ್ ನೆಲೆಯಲ್ಲಿ 88 ಮಹಿಳೆಯರನ್ನೊಳಗೊಂಡ ಮೊದಲ ಬೆಟಾಲಿಯನ್ ಸ್ಥಾಪನೆಯಾಗಿತ್ತು. ಈಗ ತಲಾ 1000 ಸಿಬ್ಬಂದಿಯುಳ್ಳ 6 ಘಟಕಗಳಿವೆ. ಕಾದರ್ ಪುರದ ಸಿ ಆರ್ ಪಿ ಎಫ್ ಕ್ಯಾಂಪಸ್ ನಲ್ಲಿ ನಡೆದ ರೈಸಿಂಗ್ ಡೇ ಸಮಾರಂಭದಲ್ಲಿ ಸಿ ಆರ್ ಪಿ ಎಫ್ ನಿರ್ದೇಶಕ ಜನರಲ್ ಎ ಪಿ ಮಹೇಶ್ವರಿ ಭಾಗವಹಿಸಿದ್ದರು. ಲಿಂಗತ್ವ ಆಧಾರದಲ್ಲಿನ ವರ್ಗೀಕರಣಗಳನ್ನು ಸುಳ್ಳು ಮಾಡುವಲ್ಲಿ ಇಂಥ ಕಾರ್ಯಕ್ರಮಗಳು ಪ್ರಮುಖವಾಗಿವೆ. ಈ ಮಹಿಳೆಯರು ಅಪಾರ ಸಂಖ್ಯೆಯ ಯುವತಿಯರಿಗೆ ಸ್ಪೂರ್ತಿಯಾಗಿದ್ದಾರೆ ಎಂದು ಜನರಲ್ ಮಹೇಶ್ವರಿ ಅವರು ಮಾತನಾಡಿದರು.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!