ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲುಂಡಿದ್ದು ಮುಖ್ಯಮಂತ್ರಿ ಚರಣ್ ಜೀತ್ ಸಿಂಗ್ ಮತ್ತು ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ನವಜೋತ್ ಸಿಂಗ್ ಸಿದ್ದು ಇಬ್ಬರೂ ಸೋಲುಂಡಿದ್ದಾರೆ.
ಕ್ಯಾಪ್ಟರ್ ಅಮರಿಂದರ್ ಅವರನ್ನು ವಜಾಗೊಳಿಸಿ ಚುನಾವಣೆಗೂ ಕೊನೆಯ ಹಂತದಲ್ಲಿ ಸಿಎಂ ಸ್ಥಾನ ಅಲಂಕರಿಸಿದ್ದ ದಲಿತ ಸಮುದಾಯದ ಚರಣ್ ಜೀತ್ ಸಿಂಗ್ ಒಂದು ಕ್ಷೇತ್ರದಲ್ಲಿ ಸೋಲುಂಡಿದ್ದರೆ ಮತ್ತೊಂದು ಕ್ಷೇತ್ರದಲ್ಲಿ ಅಲ್ಪ ಮುನ್ನಡೆ ಸಾಧಿಸಿದ್ದಾರೆ.
ಚರಣ್ ಜೀತ್ ಸಿಂಗ್ ಚಾಮ್ ಕೌರ್ ಸಾಹಿಬ್ ಕ್ಷೇತ್ರದಲ್ಲಿ 5 ಸುತ್ತುಗಳ ಮತ ಎಣಿಕೆ ನಂತರ ಅಲ್ಪ ಮುನ್ನಡೆ ಸಾಧಿಸಿದ್ದರೆ ಬದೌರ್ ಕ್ಷೇತ್ರದಲ್ಲಿ ಸೋಲುಂಡಿದ್ದಾರೆ.
ಅಮೃತಸರ ಪೂರ್ವ ಕ್ಷೇತ್ರದಿಂದ ಸ್ಪರ್ಧಿಸಿದ್ದ ನವಜೋತ್ ಸಿಂಗ್ ಸಿದ್ದು 6750 ಮತಗಳಿಂದ ಆಪ್ ಅಭ್ಯರ್ಥಿ ವಿರುದ್ಧ ಸೋಲುಂಡಿದ್ದಾರೆ.