ಕಾಂಗ್ರೆಸ್ ಕಚೇರಿಯಲ್ಲಿ ಹುಕ್ಕಾ ಬಾರ್ ತೆರೆಯಲಿ ಎಂದ ಸಿಟಿ ರವಿ ಒಬ್ಬ ದೇಶದ್ರೋಹಿ. ಈ ಮೂಲಕ ಸಿಟಿ ರವಿ ಸ್ವಾತಂತ್ರ್ಯ ಹೋರಾಟಗಾರನ್ನ ಅವಮಾನಿಸಿದ್ದಾರೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಕಿಡಿಕಾರಿದ್ದಾರೆ.
ಮಂಗಳೂರಿನ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಾಂಧೀಜಿ ಕೊಂದ ಗೋಡ್ಸೆಯನ್ನ ಇವರು ದೇಶಪ್ರೇಮಿ ಅಂತಾರೆ. ಸಾಮಾಜಿಕ ಹಿನ್ನೆಲೆ ಇಲ್ಲದ, ಲೂಸ್ ಟಾಕ್ ಮಾಡುವ ಮಂದಿಗೆ ಬಿಜೆಪಿ ಮಣೆ ಹಾಕುತ್ತಿದೆ ಎಂದರು.
ಸಿಟಿ ರವಿಯವರ ಬಾಲಿಶವಾದ ಹೇಳಿಕೆಯನ್ನು ನಾವು ಖಂಡಿಸುತ್ತೇವೆ. ಮಂಗಳೂರಲ್ಲಿ ಅಂಬೇಡ್ಕರ್ ಭವನವನ್ನು ಯಾವಾಗಲೋ ಉದ್ಘಾಟನೆ ಮಾಡಬೇಕಿತ್ತು. ಅದಕ್ಕೆ ಸಿಎಂ ಉದ್ಘಾಟನೆ ಮಾಡುವ ವೇಳೆ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿದ್ದು ಕಾರಣ ಎಂದು ಅವರು ಆರೋಪಿಸಿದರು.