ಗದಗ : ಶಾಸಕರೆ ಖುದ್ದಾಗಿ ಕೋವಿಡ್ ಕೇಂದ್ರದಲ್ಲಿ ಸೋಂಕಿತ ಬಾಲಕನ ಹುಟ್ಟುಹಬ್ಬ ಆಚರಣೆ ಮಾಡಿ ಮಾನವೀಯ ಮೆರೆದಿರುವಂತಹ ಘಟನೆ ಗದಗ ಜಿಲ್ಲೆ ಲಕ್ಷೇಶ್ವರ ಪಟ್ಟಣದ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಕೋವಿಡ್ ಕೇರ್ ಸೆಂಟರ್ ನಡೆದಿದೆ.
ಕೋವಿಡ್ ಸೋಂಕಿತರಿಗೆ ಆತ್ಮಸ್ಥೈರ್ಯಕ್ಕಾಗಿ ಜಾನಪದ ಹಾಡುವಗಳ ಹಾಡುವ ಮೂಲಕ ಸಂಭ್ರಮ ಕಾರ್ಯಕ್ರಮ ಆಯೋಜನೆ ಮಾಡಿದ್ರು. ಇನ್ನು ಲಕ್ಷ್ಮೇಶ್ವರ ತಾಲೂಕಿನ ಕುಂದ್ರಳ್ಳಿ ಗ್ರಾಮದ ದಂಪತಿ ಮತ್ತು ಮಕ್ಕಳಿಬ್ಬರಿಗೆ ಕೊರೋನಾ ಸೋಂಕು ಧೃಡಪಟ್ಟಿದೆ. ಈ ವೇಳೆ ಸೋಂಕಿತ ಮಗುವಿನ ಜನ್ಮದಿನ ಇರುವದನ್ನು ಮನಗಂಡ ಶಾಸಕ ರಾಮಣ್ಣ ಲಮಾಣಿ ಅವರು ತಕ್ಷಣ ಹೊಸಬಟ್ಟೆ ಹಾಗೂ ಕೇಕ್ ತರಿಸಿ ಸೋಂಕಿತ ಮಗುವಿನ ಹುಟ್ಟುಹಬ್ಬ ಆಚರಣೆ ಮಾಡಿದ್ದಾರೆ.
ಅಷ್ಟೇ ಅಲ್ಲದೇ ಅನಾರೋಗ್ಯ, ಮಾನಸಿಕ ಚಿಂತೆ ನಡುವೆಯೂ ಮಗುವಿನ ಹುಟ್ಟುಹಬ್ಬ ಆಚರಣೆ ಮಾಡುವ ಮೂಲಕ ತಂದೆ ತಾಯಿಯ ಕಣ್ಣಲ್ಲಿ ತಮ್ಮ ಮಗನ ಹುಟ್ಟು ಹಬ್ಬ ಸಂಭ್ರಮ ಕಂಡು ಆನಂದ ಭಾಷ್ಪ ಹರಿಸಿದ್ದಾರೆ.
ಇನ್ನು ತಾಲೂಕಿನ ಎಲ್ಲ ಅಧಿಕಾರಿಗಳು, ಸೋಂಕಿತರ ನಡುವೆ ಪುಟ್ಟ ಮಗುವಿನ ಜನ್ಮದಿನಾಚರಣೆ ಮಾಡುವ ಮೂಲಕ ಮಾನವೀಯ ಮೆರೆದ ಶಾಸಕ ರಾಮಣ್ಣ ಲಮಾಣಿ ಅವರ ಬಗ್ಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ..