ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರ ಟ್ವಿಟರ್ ಅನ್ನು ಬ್ಲಾಕ್ ಮಾಡಲಾಗಿದೆ. ಇದನ್ನು ಸ್ವತಃ ಸಚಿವರೇ ಮಾಧ್ಯಮಗಳಿಗೆ ಬಹಿರಂಗಪಡಿಸಿದ್ದಾರೆ.
ದೂರದರ್ಶನದಲ್ಲಿ ನಡೆದ ಚರ್ಚೆಯ ವೀಡಿಯೋ ದೃಶ್ಯಗಳನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಕ್ಕೆ ನಿಯಮ ಉಲ್ಲಂಘನೆ ಎಂದು ಸುಮಾರು ಒಂದು ಗಂಟೆ ಕಾಲ ಟ್ವಿಟರ್ ಬಳಕೆ ನಿಲ್ಲಿಸಲಾಗಿತ್ತು ಎಂದು ರವಿಶಂಕರ್ ಪ್ರಸಾದ್ ಹೆಳಿದ್ದಾರೆ.
ಸಾಮಾಜಿಕ ಜಾಲತಾಣಗಳ ಕಾರ್ಯ ಚಟುವಟಿಕೆ ನಿರ್ಬಂಧಿಸುವ ನೂತನ ನಿಯಮಗಳ ಜಾರಿ ಕುರಿತು ಟ್ವಿಟರ್ ಮತ್ತು ಕೇಂದ್ರ ಸರಕಾರದ ನಡುವೆ ಕಿತ್ತಾಟ ಮುಂದುವರಿದಿದ್ದು, ಇತ್ತೀಚೆಗಷ್ಟೇ ಬಂಧನ ಭೀತಿ ಹಿನ್ನೆಲೆಯಲ್ಲಿ ಭಾರತದ ಟ್ವಿಟರ್ ಮುಖ್ಯಸ್ಥರು ಬೆಂಗಳೂರಿನಲ್ಲಿ ನಿರೀಕ್ಷಣಾ ಜಾಮೀನು ಪಡೆದಿದ್ದರು. ಇದರ ಬೆನ್ನಲ್ಲೇ ಕೇಂದ್ರ ಸರಕಾರದ ಸಚಿವರೊಬ್ಬರ ಖಾತೆಯನ್ನು ಬ್ಲಾಕ್ ಮಾಡಿ ಟ್ವಿಟರ್ ತಿರುಗೇಟು ನೀಡಿದೆ.