ಸುಮಾರು ನವವಿವಾಹಿತ ಜೋಡಿಗಳು ಹನಿಮೂನ್ ಗೆ ವಿದೇಶಕ್ಕೆ ತೆರಳುವ ಪ್ಲಾನ್ ಮಾಡ್ತಾರೆ. ಆದ್ರೆ ಭಾರತದಲ್ಲಿಯೇ ನವ ಜೋಡಿ ಸುತ್ತಾಡುವಂತಹ ಸುಂದರ ಸ್ಥಳಗಳು ಸಾಕಷ್ಟಿವೆ. ಕೇವಲ ಕಡಿಮೆ ಬೆಲೆಯೊಂದೇ ಅಲ್ಲ ನವ ಜೋಡಿಗೆ ಸ್ವೀಟ್ ಮೆಮೋರಿಸ್ ನೀಡುವಂತಹ ಅದ್ಭುತ ಪ್ಲೇಸ್ಗಳಿವೆ.
ಗೋವಾ – ನಮ್ಮ ದೇಶದ ಒಂದು ಚಿಕ್ಕ ರಾಜ್ಯವಾದ ಇದು ರೋಮ್ಯಾನ್ಸ್ ಗೆ ಎಲ್ಲ ಸಮಯದಲ್ಲೂ ಬೆಸ್ಟ್ ಪ್ಲೇಸ್ ಗೋವಾ. ಅಲ್ಲಿನ ಬೀಚ್, ರೆಸಾರ್ಟ್, ಅಲ್ಲಿನ ಸಂಸ್ಕೃತಿ ನವ ಜೋಡಿ ನಡುವೆ ಪ್ರೀತಿ ಹೆಚ್ಚಿಸುವುದರಲ್ಲಿ ಎರಡು ಮಾತಿಲ್ಲ. ಆ ಪರಿಸರ ನವಜೋಡಿಯ ಮದ್ಯೆ ಆತ್ಮೀಯ ಬಾಂಧವ್ಯವನ್ನು ಬೇಸೆಯುತ್ತದೆ.

ಅಂಡಮಾನ್-ನಿಕೊಬಾರ್ -ಅದರಲ್ಲೂ ಅಂಡಮಾನ್-ನಿಕೊಬಾರ್ ಒಂದು ತುಂಬಾ ಸುಂದರ ದ್ವೀಪ. ಅಲ್ಲಿನ ಶಾಂತ ಸಮುದ್ರ ತೀರ ಹಾಗೂ ಬೆಟ್ಟಗಳು ಪ್ರಣಯ ಪಕ್ಷಿಗಳಿಗೆ ಹೇಳಿ ಮಾಡಿಸಿದಂತಿವೆ. ವರ್ಣರಂಜಿತ ಹವಳದ ಬಂಡೆಗಳು, ನೀರಿನಲ್ಲಿ ಮಾಡುವ ಸಾಹಸಗಳು ದಂಪತಿಗೆ ಮತ್ತಷ್ಟು ಆನಂದ ನೀಡುತ್ತವೆ. ಅಲ್ಲಿಗೆ ಹೋದ್ರೆ ಸಾಕು ನಮ್ಮನ್ನ ನಾವೇ ಮರೆತು ಬಿಡ್ತಿವೆ.

ಮುನ್ನಾರ್ – ಕೇರಳ ರಾಜ್ಯದಲ್ಲಿರುವ ಮುನ್ನಾರ್ ಹನಿಮೂನ್ ಗೆ ಫೇವರೆಟ್. ಅಲ್ಲಿನ ಗಿರಿಧಾಮ ಹಾಗೂ ಹವಾಮಾನ ಮನಸ್ಸಿಗೆ ಮುದ ನೀಡುತ್ತವೆ. ನದಿ, ಜಲಪಾತ, ಪ್ರಕೃತಿ ಜೊತೆ ಸಮಯ ಸರಿದಿದ್ದು ತಿಳಿಯೋದಿಲ್ಲ. ಟ್ರೆಕ್ಕಿಂಗ್ ಹಾಗೂ ಬೈಕಿಂಗ್ ಗೆ ಪ್ರಶಸ್ತವಾದ ಜಾಗ.ಇದು ಪ್ರವಾಸಿಗರ ಅಚ್ಚುಮೆಚ್ಚಿನ ಸ್ಥಳ. ಇಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮನಸ್ಸು ಕರಗಿ ಹೋಗುತ್ತದೆ ಅಲ್ಲದೇ ಹೊಸ ಉತ್ಸಾಹ ಚಿಮ್ಮುವುದರ ಜೊತೆಗೆ ಜನರನ್ನ ಆಕರ್ಷಣೆ ಮಾಡುತ್ತದೆ.

ಇಷ್ಟೇ ಅಲ್ಲ ಇನ್ನೂ ನೂರಾರು ಸುಂದರವಾದ ಪ್ರವಾಸಿ ತಾಣಗಳು ನಮ್ಮ ದೇಶದಲ್ಲಿವೆ. ನವಜೋಡಿಗಳ ಮನ ಸೆಳೆಯುವಂತ ತಾಣಗಳಿಗೇನು ನಮ್ಮ ದೇಶದಲ್ಲಿ ಕಡಿಮೆ ಇಲ್ಲಾ. ಪ್ರತಿ ರಾಜ್ಯದಲ್ಲೂ ಒಂದಲ್ಲಾ ಒಂದು ಸ್ಥಳಗಳು ತಮ್ಮದೇ ಆದತಂಹ ವಿಶೇಷತೆಯನ್ನ ಹೊಂದಿವೆ. ಆದರೂ ನಮ್ಮ ದೇಶದ ಜನರೂ ವಿದೇಶಿ ಸ್ಥಳಗಳಿಗೆ ತೆರಳಲೂ ಇಷ್ಟಪಡುತ್ತಾರೆ ಅಂದರೆ ನಿಜಕ್ಕೂ ಆಶ್ಚರ್ಯಕರ ಸಂಗತಿ.