ನವದೆಹಲಿ: ದೇಶಾದ್ಯಂತ ಕೋವಿಡ್-19 ಸೋಂಕು ಪ್ರಕರಣಗಳು ನಿಯಂತ್ರಣ ಮೀರಿ ಏರಿಕೆಯಾಗುತ್ತಿವೆ. ದೇಶಾದ್ಯಂತ 93,249 ಹೊಸ ಕೊರೋನಾ ಸೋಂಕು ಪ್ರಕರಣಗಳು ದಾಖಲಾಗಿವೆ. ಕಳೆದ ಆರು ತಿಂಗಳಲ್ಲಿಯೇ ದಿನವೊಂದಕ್ಕೆ ವರದಿಯಾದ ಗರಿಷ್ಠ ಪ್ರಕರಣಗಳು ಎನಿಸಿವೆ.
ಈ ಮೂಲಕ ದೇಶದ ಒಟ್ಟು ಸೋಂಕಿತರ ಸಂಖ್ಯೆ 1.24 ಕೋಟಿ ದಾಟಿದೆ. ಕೊರೋನಾದಿಂದ ದೇಶದಲ್ಲಿ 1,64,623 ಮಂದಿ ಸಾವನ್ನಪ್ಪಿದ್ದಾರೆ. ಕೊರೋನಾದಿಂದ ಈವರೆಗೆ ಒಟ್ಟು 1,16,29,289 ಜನ ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಇನ್ನು ಕೊರೋನಾ ಸೋಂಕು ಪ್ರಕರಣಗಳಿಗೆ ಸಂಬಮದಿಸಿದಂತೆ ಮಹಾರಾಷ್ಟ್ರ ರಾಜಧಾನಿ ಮುಂಬೈನಲ್ಲಿ ಒಂದೇ ದಿನ 9000ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ.
ಈ ಮೂಲಕ ಮುಂಬೈ ತನ್ನ ಈ ಹಿಂದಿನ ದಾಖಲೆಯನ್ನು ಮುರಿದಿದೆ. ಮಹಾರಾಷ್ಟ್ರದಲ್ಲಿ 49,447, ಕೇರಳದಲ್ಲಿ 2541, ಕರ್ನಾಟಕದಲ್ಲಿ 4373, ಆಂಧ್ರ ಪ್ರದೇಶದಲ್ಲಿ 1,398 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ.