ಉತ್ತರ ಕರ್ನಾಟಕ ಭಾಗದ ರೈತರ ಹಬ್ಬ ಮಣ್ಣೆತ್ತಿನ ಅಮವಾಸ್ಯೆಯಾಗಿದೆ. ಮಣ್ಣೆತ್ತಿನ ಅಮವಾಸ್ಯೆ ಹಿನ್ನೆಲೆಯಲ್ಲಿ ಗದಗನ ಮಾರುಕಟ್ಟೆಗಳಲ್ಲಿ ಎತ್ತುಗಳ ಮಣ್ಣಿನ ಮೂರ್ತಿಗಳನ್ನ ಖರೀದಿ ಭರ್ಜರಿಯಾಗಿದೆ ನಡೆಯಿತು.
ಹೌದು, ಕೊರೊನಾ ಹಿನ್ನೆಲೆಯಲ್ಲಿ ಸಂಕಷ್ಟ ಅನುಭವಿಸಿದ್ದರೂ ಸಂಪ್ರದಾಯ ಬಿಡದ ರೈತಾಪಿ ವರ್ಗ ಅಮವಾಸ್ಯೆಯ ದಿನವಾದ ಇಂದು ಎತ್ತುಗಳ ಮೂರ್ತಿಗಳನ್ನ ಮನೆಗೆ ತಂದು ಪೂಜಿಸೋ ಮೂಲಕ ವಿಶೇಷವಾಗಿ ಆಚರಿಸಿದರು.
ಎತ್ತಿನ ಮೂರ್ತಿಗಳನ್ನು ತಂದು ಸಡಗರದಿಂದ ಪೂಜಿಸುವ ಮೂಲಕ ಮಣ್ಣೆತ್ತಿನ ಅಮವಾಸ್ಯೆ ಹಬ್ಬ ಆಚರಣೆ ಮಾಡತ್ತಾರೆ. ಇನ್ನು ಮಳೆಯಿಂದ ಬಿತ್ತನೆ ಮಾಡಿದ ಫಸಲು ಸಮೃದ್ಧಯಾಗಿ ಬರಲಿ ಎಂದು ರೈತರು ಪ್ರಾರ್ಥನೆ ಮಾಡತ್ತಾರೆ. ತಮ್ಮ ರಾಸುಗಳಿಗೆ ಯಾವ ತೊಂದರೆಯೂ ಬಾರದಿರಲಿ ಎಂದು ಭಕ್ತಿಯಿಂದ ಸ್ಮರಿಸಿದರು.