ಆಗತಾನೇ ಜನಿಸಿದ್ದ ಮಗಳ ಸಾವಿನ ದುಃಖದಲ್ಲೂ ರಣಜಿ ಟ್ರೋಫಿ ಪಂದ್ಯದಲ್ಲಿ ಅಖಾಡಕ್ಕಿಳಿದ ಬರೋಡಾ ಬ್ಯಾಟ್ಸ್ ಮನ್ ಶತಕ ಸಿಡಿಸಿ ಗಮನ ಸೆಳೆದಿದ್ದಾರೆ.
ಚಂಡೀಗಢ ವಿರುದ್ಧದ ಪಂದ್ಯದಲ್ಲಿ ಬರೋಡಾ ಪರ ಆಡಿದ ವಿಷ್ಣು ಸೋಲಂಕಿ ಮಗಳ ಸಾವಿನ ದುಃಖದಲ್ಲೂ ಶತಕ ಸಿಡಿಸಿ ತಂಡಕ್ಕೆ ನೆರವಾದರು.
ಪಂದ್ಯದ ಎರಡನೇ ದಿನ ಸೋಲಂಕಿ ಬ್ಯಾಟ್ ಮಾಡಲು ಬಂದಾಗ ಪಂದ್ಯ ಸಮಬಲದಲ್ಲಿತ್ತು. ಅದರಲ್ಲೂ ಪರಿಸ್ಥಿತಿಗಳು ತಂಡದ ಪರವಾಗಿರಲಿಲ್ಲ. ವೈಯಕ್ತಿಕವಾಗಿಯೂ ನೋವಿನಲ್ಲಿದ್ದ ಸೋಲಂಕಿ ನೋವಿನ ನಡುವೆಯೂ 168 ರನ್ ಸಿಡಿಸಿ ತಂಡ ಉತ್ತಮ ಸ್ಥಿತಿ ತಲುಪಲು ನೆರವಾದರು. ಇದರಲ್ಲಿ 13 ಬೌಂಡರಿ ಗಳಿಸಿದರು.
ಸೋಲಂಕಿ ಪಶ್ಚಿಮ ಬಂಗಾಳ ವಿರುದ್ಧದ ಪಂದ್ಯಕ್ಕಾಗಿ ಭುವನೇಶ್ವರಕ್ಕೆ ಬಂದಿದ್ದಾಗ ಮಗಳ ಸಾವಿನ ಸುದ್ದಿ ಬರಸಿಡಿಲಿನಂತೆ ಅಪ್ಪಳಿಸಿತು. ಕೂಡಲೇ ತವರಿಗೆ ಮರಳಿದ ಸೋಲಂಕಿ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಿ ನಂತರ ತಂಡಕ್ಕೆ ಮರಳಿದ್ದರು.