ಬಾಗಲಕೋಟೆ: ಅನೈತಿಕ ಸಂಬಂಧ ಹಿನ್ನಲೆಯಲ್ಲಿ ಪ್ರಿಯತಮೆ ಹಾಗೂ ಸಂಬಂಧಿಗಳು ಸೇರಿ ಪ್ರಿಯಕರನನ್ನು ಕೊಲೆಗೈದ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ನರೇನೂರು ಗ್ರಾಮದ ಹೊಲದಲ್ಲಿ ನಿನ್ನೆ ತಡರಾತ್ರಿ ಕೊಲೆ ನಡೆದಿದೆ.
ಲಕ್ಷ್ಮಣ್ ವಡ್ಡರ (45) ಕೊಲೆಯಾದ ವ್ಯಕ್ತಿ, ಬಡಿಗೆ ಹೊಡೆದಿದ್ದಾರೆ.ಈ ವೇಳೆ ಗಂಭೀರ ಗಾಯಾಳು ಲಕ್ಷ್ಮಣ್ ನನ್ನು ಕೆರೂರು ಆಸ್ಪತ್ರೆಗೆ ದಾಖಲಿಸುವ ವೇಳೆ ಮೃತಪಟ್ಟಿದ್ದಾನೆ.
ಮೊನ್ನೆ ಲಕ್ಷ್ಮಣ್ ಮನೆಯವರು ಪ್ರೀಯತಮೆ ರೇಣುಕಾ ಮೇಲೆ ಹಲ್ಲೆ ನಡೆಸಿದ್ದರು ಎನ್ನಲಾಗಿದೆ. ಹೀಗಾಗಿ ಅದೇ ಸಿಟ್ಟು ಇಟ್ಟುಕೊಂಡು ಪ್ರೀಯಕರನ ಮೇಲೆ ಹಲ್ಲೆ ನಡೆಸಿದ ವೇಳೆ ದುರ್ಘಟನೆ ನಡೆದಿದೆ.
ಆರೋಪಿಗಳಾದ ಯಮನಪ್ಪ, ಮಂಜಪ್ಪ, ವಿಠ್ಠಲ, ಚಿಕ್ಕೂರ, ಹಾಗೂ ಪ್ರಿಯತಮೆ ರೇಣುಕಾ ಬೆಳಗಂಟಿ ಎಂಬುವರು ಸೇರಿ ಕೊಲೆಗೈದು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.