ಬೆಂಗಳೂರು : ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ವಿವಾಹಿತ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಶ್ವೇತಾ (28) ಎಂದು ಗುರುತಿಸಲಾಗಿದೆ.
ಕಳೆದ ವರ್ಷ ಕೃಷ್ಣಮೂರ್ತಿ ಎಂಬಾತನ ಜೊತೆ ವಿವಾಹವಾಗಿದ್ದ ಶ್ವೇತಾ ಇದೇ ಬಾಗಲುಗುಂಟೆಯಲ್ಲೆ ವಾಸ ಮಾಡುತ್ತಿದ್ದಳು. ಮದುವೆ ಸಮಯದಲ್ಲಿ ಕೃಷ್ಣಮೂರ್ತಿ ಗೆ ಶ್ವೇತಾ ಕುಟುಂಬದವರು ಬೇಕಾದಷ್ಟು ಒಡವೆ ಕೊಟ್ಟಿದ್ದರು. ಆದರೆ ವರದಕ್ಷಿಣೆ ದಾಹ ಮಾತ್ರ ಕಡಿಮೆ ಆಗಿರಲಿಲ್ಲ. ಮದುವೆಯಾದಗಿನಿಂದ ಒಂದಲ್ಲ ಒಂದು ವಿಚಾರಕ್ಕೆ ಗಲಾಟೆ ಮಾಡ್ತಿದ್ದ ಕೃಷ್ಣಮೂರ್ತಿ, ತವರು ಮನೆಯಿಂದ ಹಣ ಒಡವೆ ತರುವಂತೆ ಪೀಡಿಸುತ್ತಿದ್ದ. ಗಂಡನ ಹಿಂಸೆ ತಾಳಲಾರದೆ ತಾಯಿಗೆ ಕರೆ ಮಾಡಿ ಅತ್ತಿದ್ದ ಶ್ವೇತಾ ಬಳಿಕ ತನ್ನ ರೂಂಗೆ ಹೋಗಿ ನೇಣಿಗೆ ಶರಣಾಗಿದ್ದಾಳೆ.
ಇನ್ನು ಶ್ವೇತಾ ಮನೆಯಲ್ಲಿ ಬಾಡಿಗೆಗೆ ಇದ್ದವರು ಶ್ವೇತಾ ಪೋಷಕರಿಗ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಬಳಿಕ ಆಕೆಯನ್ನ ಪ್ರಕ್ರಿಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ಶ್ವೇತಾ ಸಾವನ್ನಪ್ಪಿದ್ದಾಳೆ. ಪ್ರಕರಣ ಸಂಬಂಧ ಬಾಗಲಗುಂಟೆ ಪೊಲೀಸರು ಪತಿ ಹಾಗೂ ಕುಟುಂಬಸ್ಥರ ವಿರುದ್ಧ ಕೇಸ್ ದಾಖಲು ಮಾಡಿಕೊಂಡು ತನಿಖೆ ಮುಂದುವರೆಸಿದ್ದಾರೆ.