ವಿಜಯಪುರ : ದ್ವಿಚಕ್ರ ವಾಹನ ಸವಾರರು ಪರಸ್ಪರ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಇಬ್ಬರು ಮೃತಪಟ್ಟ ಘಟನೆ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಬರಡೋಲ ಗ್ರಾಮದ ಹತ್ತಿರ ಸಂಭವಿದೆ.
ಗುಂದವಾನ ದಿಂದ ಚಡಚಣಕ್ಕೆ ಹೊರಟಿದ್ದ ಅರಬಾಜ ಶೇಖ (23) ಹಾಗೂ ಗೋಡಿಹಾಳ ಗ್ರಾಮದ ರಾಜೇಂದ್ರ ಬಸಪ್ಪ ಕಾಂಬಳೆ (45) ಮೃತ ಬೈಕ್ ಸವಾರರು ಎಂದು ಗುರುತಿಸಲಾಗಿದೆ.
ಘಟನೆಯಲ್ಲಿ ಗಾಯಗೊಂಡಿದ್ದ ಸಿದ್ದರಾಯ ಶಂಕರಪ್ಪ ಕಾಂಬಳೆ ಎಂಬುವರನ್ನು ಚಿಕಿತ್ಸೆಗೆ ವಿಜಯಪುರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಚಡಚಣ ಪೋಲಿಸರು ಬೇಟಿ ನೀಡಿದ್ದಾರೆ. ಘಟನೆ ಬಗ್ಗೆ ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಾಗಿದೆ.