ಮಂಡ್ಯ : ಅತ್ತಿಗೆಯನ್ನು ಕೊಲೆ ಮಾಡಿ ಆತ್ಮಹತ್ಯೆಗೆ ಶರಣಾದ ನಾದಿನಿ

ಮಂಡ್ಯ: ಅತ್ತಿಗೆಯನ್ನು ಬರ್ಬರವಾಗಿ ಹತ್ಯೆಗೈದ ನಾದಿನಿ ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಡ್ಯ ಜಿಲ್ಲೆಯ ಕಂಬದಹಳ್ಳಿಯಲ್ಲಿ ನಡೆದಿದೆ.

ಅತ್ತಿಗೆ ಪ್ರಿಯಾಂಕಾ (32)ಯನ್ನು ಕೊಂದು ನಾದಿನಿ ಗಿರಿಜಾ (31) ತಾನೂ ನೇಣಿಗೆ ಶರಣಾಗಿದ್ದಾಳೆ. ದಿನವೂ ಇಬ್ಬರ ನಡುವೆ ಗಲಾಟೆ ನಡೆಯುತ್ತಿದ್ದು, ಇದೀಗ ಇಬ್ಬರ ಸಾವಿನಲ್ಲಿ ಘಟನೆ ಅಂತ್ಯವಾಗಿದೆ. ಕೌಟುಂಬಿಕ ಕಲಹವು ಇದೀಗ ಅತ್ತಿಗೆ ನಾದಿನಿಯರಿಬ್ಬರ ಪ್ರಾಣವನ್ನೇ ಬಲಿ ಪಡೆದಿದೆ.

ಅತ್ತಿಗೆ ಪ್ರಿಯಾಂಕಾ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ ಮಾಡಿ ಬಳಿಕ ಗಿರಿಜಾ ತಾನೂ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಘಟನೆ ಬಗ್ಗೆ ಬಸರಾಳು ಪೊಲೀಸ್ ಠಾನೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!