ಉತ್ತರ ಓಡಿಶಾದ ಧಮ್ರಾ ಕಡಲ ತೀರಕ್ಕೆ ‘ಯಾಸ್’ ಚಂಡಮಾರುತ ಬುಧವಾರ ಬೆಳಿಗ್ಗೆ ಅಪ್ಪಳಿಸಿದ್ದು, ಪಶ್ಚಿಮ ಬಂಗಾಳದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಉತ್ತರ ಓಡಿಶಾದ ಧಮ್ರಾ ಮತ್ತು ಬಾಲಸೂರ್ ಪ್ರದೇಶಗಳ ನಡುವೆ ಬುಧವಾರ ಬೆಳಿಗ್ಗೆ ಅಪ್ಪಳಿಸಿದೆ. ಯಾಸ್ ಚಂಡಮಾರುತದ ವೇಗ 145ರಿಂದ 155 ಕಿ.ಮೀ.ವೇಗದಲ್ಲಿ ಬೀಸುತ್ತಿದ್ದು, ಬೆಳಿಗ್ಗೆ 9.15ರ ವೇಳೆಗೆ 45ರಿಂದ 55 ಕಿ.ಮೀ. ವೇಗದಲ್ಲಿ ಬೀಸುತ್ತಿತ್ತು.
ಯಾಸ್ ಚಂಡಮಾರುತ ಸುಮಾರು 4 ಗಂಟೆಗಳ ಕಾಲ ಕರಾವಳಿ ಪ್ರದೇಶದಲ್ಲಿ ಅಬ್ಬರಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಪಶ್ಚಿಮ ಬಂಗಾಳದಲ್ಲಿ ಈಗಾಗಲೇ 2 ಲಕ್ಷ ಜನರನ್ನು ಸ್ಥಳಾಂತರಿಸಲಾಗಿದ್ದು, ಹೈ ಅಲರ್ಟ್ ಘೋಷಿಸಲಾಗಿದೆ. ಎನ್ ಡಿಆರ್ ಎಫ್ ಸೇರಿದಂತೆ ಭದ್ರತಾ ಪಡೆಗಳು ರಕ್ಷಣೆ ನಿಯೋಜಿಸಲಾಗಿದೆ.