ದಕ್ಷಿಣ ಆಫ್ರಿಕಾದ ಮಧ್ಯಮ ವೇಗಿ ಡೇಲ್ ಸ್ಟೇನ್ ಎಲ್ಲಾ ಮಾದರಿಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದಾರೆ.
ಪದೇಪದೆ ಕಾಡುವ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಡೇಲ್ ಸ್ಟೇನ್ ಮಂಗಳವಾರ ನಿವೃತ್ತಿ ಘೋಷಿಸುವ ಮೂಲಕ 16 ವರ್ಷಗಳ ಕ್ರಿಕೆಟ್ ಬದುಕಿನಿಂದ ತೆರೆಮರೆಗೆ ಸರಿದಿದ್ದಾರೆ.
2021ರ ಐಪಿಎಲ್ ನಿಂದ ಹಿಂದೆ ಸರಿದಿದ್ದ ಸ್ಟೇನ್ ಜಾಗತಿಕ ಕ್ರಿಕೆಟ್ ಕಂಡ ಅದ್ಭುತ ಬೌಲರ್ ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದರು. ಟೆಸ್ಟ್ ಕ್ರಿಕೆಟ್ ನಲ್ಲಿ 439 ವಿಕೆಟ್ ಪಡೆದಿರುವ ಸ್ಟೇನ್, ಆಫ್ರಿಕಾ ಪರ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
2004ರಲ್ಲಿ ಕ್ರಿಕೆಟ್ ಗೆ ಪಾದರ್ಪಣೆ ಮಾಡಿದ್ದ ಸ್ಟೇನ್, 2020 ಫೆಬ್ರವರಿ 21ರಂದು ಸ್ಟೇನ್ ದಕ್ಷಿಣ ಆಫ್ರಿಕಾ ಪರ ಕೊನೆಯ ಬಾರಿಗೆ ಆಡಿದ್ದರು. ಇದುವರೆಗೆ 93 ಟೆಸ್ಟ್, 125 ಏಕದಿನ ಮತ್ತು 47 ಟಿ-20 ಪಂದ್ಯಗಳನ್ನು ಆಡಿದ್ದಾರೆ.