ನಟ, ಹಾಸ್ಯ ಕಲಾವಿದ ಡ್ಯಾನಿಶ್ ಸೇಠ್ ತಮ್ಮ ದೀರ್ಘಕಾಲದ ಗೆಳತಿ ಆನ್ಯಾ ರಂಗಸ್ವಾಮಿ ಅವರನ್ನು ವರಿಸಿದ್ದಾರೆ.
ಕಳೆದ ಡಿಸೆಂಬರ್ ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಡ್ಯಾನಿಶ್ ಸೇಠ್ ಮತ್ತು ಆನ್ಯಾ ರಂಗಸ್ವಾಮಿ ಬುಧವಾರ ವೈವಾಹಿಕ ಜೀವನಕ್ಕೆ ಪಾದರ್ಪಣೆ ಮಾಡಿದ್ದು, ಗುರುವಾರ ಮದುವೆ ಸಮಾರಂಭದ ಮೊದಲ ಫೋಟೋ ಬಿಡುಗಡೆ ಮಾಡಿದ್ದಾರೆ.
ಕೋವಿಡ್ ನಿಯಮದ ಅನ್ವಯ ವಿವಾಹ ಸಮಾರಂಭದಲ್ಲಿ ಕುಟುಂಬಸ್ಥರು, ಆಪ್ತ ಸ್ನೇಹಿತರು ಮಾತ್ರ ಪಾಲ್ಗೊಂಡಿದ್ದರು.
ನಾನು ಮತ್ತು ಆನ್ಯಾ ವಿವಾಹದ ಸಂಕೇತವಾಗಿ ಇಬ್ಬರೂ ಉಂಗುರಗಳನ್ನು ಬದಲಿಸಿಕೊಂಡೆವು. ಕೋವಿಡ್ ನಿಯಮದ ಪ್ರಕಾರ ಕೇವಲ 15 ಮಂದಿಗೆ ಮಾತ್ರ ಸಾಕ್ಷಿಯಾಗಿದ್ದರು ಎಂದು ಡ್ಯಾನಿಶ್ ಸೇಠ್ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.