ಭಾರತ ಪ್ರವಾಸದಲ್ಲಿ ಆಡಲಿರುವ ಮೂರು ಪಂದ್ಯಗಳ ಟಿ-20 ಸರಣಿಗೆ ಶ್ರೀಲಂಕಾ ತಂಡವನ್ನು ಡಾಸುನ್ ಶನಕ ಮುನ್ನಡೆಸಲಿದ್ದಾರೆ.
ಶ್ರೀಲಂಕಾ ಕ್ರಿಕೆಟ್ ಮಂಡಳಿ ಸೋಮವಾರ ಭಾರತ ವಿರುದ್ಧ ಫೆಬ್ರವರಿ 24ರಿಂದ ಆರಂಭಗೊಳ್ಳಲಿರುವ ಟಿ-20 ಸರಣಿಗೆ 18 ಆಟಗಾರರ ತಂಡವನ್ನು ಪ್ರಕಟಿಸಿದ್ದು, ಪ್ರಮುಖ ಮೂವರು ಆಟಗಾರರು ಗಾಯದ ಕಾರಣ ಹೊರಗುಳಿದಿದ್ದಾರೆ.
ಅವಿಷ್ಕಾ ಫೆರ್ನಾಂಡೊ, ನುಮಾನ್ ತುಷಾರ ಮತ್ತು ರಮೇಶ್ ಮೆಂಡಿಸ್ ಗಾಯದ ಕಾರಣ ಸರಣಿಯಿಂದ ಹೊರಗುಳಿದಿದ್ದು, ಸ್ಪಿನ್ನರ್ ಗೆ ಹೆಚ್ಚು ಒತ್ತು ನೀಡಿ ತಂಡವನ್ನು ಪ್ರಕಟಿಸಲಾಗಿದೆ.
ಟಿ-20 ಸರಣಿಗೆ ಶ್ರೀಲಂಕಾ ತಂಡ
ಡಾಸುನ್ ಶನಕ (ನಾಯಕ), ಪಾಥುಮ್ ನಿಸ್ಸಾಂಕ, ಕುಶಾಲ್ ಮೆಂಡಿಸ್, ಚೆರಿತ್ ಅಸ್ಲಾಂಕ (ಉಪನಾಯಕ), ದಿನೇಶ್ ಚಂಡಿಮಾಲ್, ಧನುಷ್ಕಾ ಗುಣತಿಲಕ, ಕಮಲ್ ಮಿಶ್ರಾ, ಜನಿತ್ ಲಿಯಾಂಗೆ, ವಹಿಂದು ಹಸರಂಗ, ಚಮಿಕಾ ಕರುಣಾರತ್ನೆ, ದುಷ್ಮಂತ ಚಮೀರ, ಲಹಿರು ಕುಮಾರ, ಬಿನುರಾ ಫೆರ್ನಾಂಡೊ, ಶಿರಾನ್ ಫೆರ್ನಾಂಡೊ, ಮಹೇಶ್ ಥೇಕ್ಷಣ, ಜೆಫ್ರಿ ವಂಡರ್ಸೆ, ಪ್ರವೀಣ್ ಜಯವಿಕ್ರಮ, ಆಶಿಯಾನ್ ಡೇನಿಯಲ್.