ಹಿರಿಯ ನಟ ಸತ್ಯಜಿತ್ ವಿರುದ್ದ ಪುತ್ರಿಯಿಂದಲೇ ದೂರು ದಾಖಲು

ವರದಿ: ವೀರೇಶ್. ಆರ್
ಬೆಂಗಳೂರು: ನನ್ನ ತಂದೆ ಹಣಕ್ಕಾಗಿ ಪೀಡಿಸುತ್ತಿದ್ದಾರೆ. ಹಣಕ್ಕಾಗಿ ರೌಡಿಗಳನ್ನು ಬಿಟ್ಟು ಬೆದರಿಸುತ್ತಿದ್ದಾರೆ. ಅವರಿಂದಲೇ ನನಗೆ ಜೀವ ಬೆದರಿಕೆಯಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಯಾಂಡಲ್ವುಡ್ ಹಿರಿಯ ನಟ ಸತ್ಯಜಿತ್ ಅವರ ಪುತ್ರಿಯೇ ತಂದೆಯ ವಿರುದ್ಧ ದೂರು ದಾಖಲಿಸಿದ್ದಾರ.
ಇಂದು ಹಿರಿಯ ನಟ ಸತ್ಯಜಿತ್ ವಿರುದ್ಧ ಬಾಣಸವಾಡಿ ಪೊಲೀಸ್ ಠಾಣೆಗೆ ತೆರಳಿ ಸತ್ಯಜಿತ್ ಪುತ್ರಿ ಅಖ್ತರ್ ಸ್ವಲೇಹಾ ಅವರು, ನನ್ನ ತಂದೆ ಸತ್ಯಜಿತ್ ಅವರು, ಪದೇ ಪದೇ ಹಣಕ್ಕಾಗಿ ಪೀಡಿಸುತ್ತಿದ್ದಾರೆ. ಹಣ ನೀಡದೇ ಇದ್ದಾಗ ರೌಡಿಗಳನ್ನು ಬಿಟ್ಟು ಬೆದರಿಸುತ್ತಿದ್ದಾರೆ. ನನಗೆ ಜೀವ ಬೆದರಿಕೆ ಇದೆ.ನನಗೆ ರಕ್ಷಣೆ ನೀಡಬೇಕು ಹಾಗೂ, ಸತ್ಯಜಿತ್ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ದೂರು ನೀಡಿದ್ದಾರೆ. ಇದೀಗ ಪೊಲೀಸರು ಹಿರಿಯ ನಟ ಸತ್ಯಜಿತ್ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.
ನಾನು ಯಾವುದೇ ಬೆದರಿಕೆ ಹಾಕಿಲ್ಲ, ಹಣಕ್ಕಾಗಿ ಬೇಡಿಕೆ ಇಟ್ಟಿಲ್ಲ: ನಟ ಸತ್ಯಜಿತ್
ತಂದೆ ಸತ್ಯಜಿತ್ ಪದೇ ಪದೇ ಹಣ ಕೇಳುತ್ತಿದ್ದಾರೆ. ರೌಡಿಗಳಿಂದ ನನಗೆ ಬೆದರಿಕೆ ಹಾಕುತ್ತಿದ್ದಾರೆ ಎಂಬುದಾಗಿ ಮಗಳು ನೀಡಿದ ದೂರಿನ ಕುರಿತು ತಮ್ಮ ನಿವಾಸದಲ್ಲಿ ಇಂದು ಪ್ರತಿಕ್ರಿಯಿಸಿದಂತ ನಟ ಸತ್ಯಜಿತ್, ನಾನು ನನ್ನ ಮಗಳಿಗೆ ಯಾವುದೇ ಬೆದರಿಕೆ ಹಾಕಿಲ್ಲ. ಮಗಳು ಹಣವನ್ನು ಕೊಟ್ಟಿಲ್ಲ. ಕಾಲಿಲ್ಲದೇ ನಡೆಯೋದಕ್ಕೂ ಆಗೋದಿಲ್ಲ. ಇಂತಹ ನನಗೆ ರೌಡಿಗಳ ಜೊತೆಗೆ ಏನ್ ಕೆಲಸ? ಹಣ ಕೊಟ್ಟಿದ್ದ ಬಗ್ಗೆ ಸಾಕ್ಷಿಗಳಿದ್ದರೇ ತೋರಿಸಲಿ ಎಂದು ಹಿರಿಯ ನಟ ಸತ್ಯಜಿತ್ ಹೇಳಿದ್ದಾರೆ.
ನನ್ನ ಮಗಳ ವಿರುದ್ಧ ಬೆದರಿಕೆ ಹಾಕಿಲ್ಲ. ನನಗೆ ಎದ್ದು ಓಡಾಡುವುದಕ್ಕೆ ಆಗಲ್ಲ. ರೌಡಿಗಳ ಜೊತೆ ನನಗೆ ಏನು ಕೆಲಸ.? ನನ್ನ ಮಗಳು ನನಗೆ ಹಣ ನೀಡಿಲ್ಲ. ನನಗೆ ಹಣ ಕೊಟ್ಟಿದ್ದರೆ ಸಾಕ್ಷಿ ತೋರಿಸಲಿ. ದೂರಿಗೂ ಮುನ್ನ ಮಾತನಾಡಲು ಹೋಗಿದ್ದೆ. ಮಾತನಾಡಲು ಹೋಗಿದ್ದಾಗ ಹಲ್ಲೆಗೆ ಮುಂದಾಗಿದ್ದಳು ಎಂದು ತಿಳಿಸಿದ್ದಾರೆ.