ದಾವಣಗೆರೆ : ಹೆರಿಗೆ ಬಳಿಕ ನವಜಾತ ಶಿಶುವನ್ನು ಕಸದ ತೊಟ್ಟಿಯಲ್ಲಿ ಬಿಸಾಕಿರುವ ಘಟನೆ ದಾವಣಗೆರೆ ಜಿಲ್ಲೆಯ ಆಲೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಕುರಬರ ಕೇರಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಹತ್ತಿರ ಇರುವ ಕಸದ ತೊಟ್ಟಿಯಲ್ಲಿ ಶಿಶುವಿನ ಶವ ಪತ್ತೆಯಾಗಿದ್ದು, ಕಸದ ತೊಟ್ಟಿಯಲ್ಲಿ ಶಿಶುವಿನ ಬಿಸಾಡಿದ ಪರಿಣಾಮ ಮಗುವಿನ ಒಂದು ಕಾಲು ನಾಯಿ ತಿಂದು ಹಾಕಿದೆ. ಮೃತ ಶಿಶು ಶವ ಕಂಡು ಗ್ರಾಮಸ್ಥರು ಮರುಗಿದ್ದಾರೆ. ಮಗುವನ್ನು ಹೆತ್ತ ತಾಯಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.