ಮೀಸಲಾತಿಗಾಗಿ ಸರಕಾರದ ವಿರುದ್ಧ ಹೋರಾಟ: ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ

ದಾವಣಗೇರೆ: ಆರ್ಥಿಕವಾಗಿ, ಸಾಮಾಜಿಕವಾಗಿ ಪಂಚಮಸಾಲಿ ಸಮಾಜದವರು ಹಿಂದುಳಿದ್ದಾರೆ. ಅವರ ಏಳೀಗೆಗಾಗಿ ಮೀಸಲಾತಿ ಅಗತ್ಯವಾಗಿದ್ದು, ಸರಕಾರದ ವಿರುದ್ಧ ಹೋರಾಟ ಅನಿವಾರ್ಯ ಎಂದು ಕೂಡಲ ಸಂಗಮದ ಪಂಚಮಸಾಲಿ ಪೀಠದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಶುಕ್ರವಾರ ದಾವಣಗೆರೆಗೆ ತಲುಪಿದ 17 ನೇ ದಿನದ ಪಾದಯಾತ್ರೆಯಲ್ಲಿ ಸಮಯದಲ್ಲಿ ಅವರು ಮಾತನಾಡಿದರು.
ಮೀಸಲಾತಿಗಾಗಿ ಪಂಚಮಸಾಲಿ ಸಮಾಜದ ಪಾದಯಾತ್ರೆಯ ಹೋರಾಟ 17 ನೇದಿನಕ್ಕೆ ಕಾಲಿಟ್ಟಿದೆ. ದಾವಣಗೆರೆ ಜಿಲ್ಲಗೆ ಇಂದು ಪಾದಯಾತ್ರೆ ಪ್ರವೇಶಿಸಿದೆ. ರಾಣಿ ಚೆನ್ನಮ್ಮರ ಹೋರಾಟದಿಂದ ಬ್ರಿಟಿಷ್ ಸಾಮ್ರಾಜ್ಯ ಪತನ ಆಯ್ತು, ರೈತರ ಹೋರಾಟದಿಂದ ಮುಖ್ಯಮಂತ್ರಿ ಯಾಗಿದ್ದದಿನೇಶ್ ಗುಂಡೂರಾವ್ ಸರ್ಕಾರ ಪತನ ಆಯ್ತು, ಪಂಚಸಾಲಿ ಸಮಾಜಕ್ಕೆ 2 ಎ ಮೀಸಲಾತಿ ಕೊಡದಿದ್ರೆ ಸಿ.ಎಂ.ಯಡಿಯ್ಯೂರಪ್ಪ ಸರ್ಕಾರ ಪತನ ಮಾಡ್ತೆವೆ ಎಂದು ಪರೋಕ್ಷವಾಗಿ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಹರಿಹರ ಪೀಠದ ವಚನಾನಂದ ಸ್ವಾಮೀಜಿ ಹಾಗೂ ಬಸವ ಮೃತ್ಯುಂಜಯ ಸ್ವಾಮೀಜಿಗಳಲ್ಲಿ ವೈಮನಸ್ಸು ಇತ್ತು ಎನ್ನುವ ವಿವಾದಕ್ಕೆ ಎರಡು ಸ್ವಾಮೀಜಿಗಳು ಒಟ್ಟಿಗೆ ವೇದಿಕೆಯಲ್ಲಿ ಗುರ್ತಿಸಿಕೊಂಡಿದ್ದು ಹೋರಾಟಕ್ಕೆಮತ್ತಷ್ಟು ಬಲ ತಂದರು.