ದಾವಣಗೆರೆ : ತಡರಾತ್ರಿ ಕಾರಿನಲ್ಲಿ 2000 ಹಾಗೂ 500 ಮುಖಬೆಲೆಯ ಕಂತೆ ಕಂತೆ ನೋಟುಗಳನ್ನು ತುಂಬಿದ ಬ್ಯಾಗ್ ಸಿಕ್ಕಿರುವ ಘಟನೆ ದಾವಣಗೆರೆ ಅಜಾದ್ ನಗರ ಪೊಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಶುಕ್ರವಾರ ತಡರಾತ್ರಿ KA-39-P-8055 ನಂಬರ್ ನ ಕಾರಿನಲ್ಲಿ ಕಲಬುರಗಿಯಿಂದ ದಾವಣಗೆರೆ ಕಡೆ ಬರುತ್ತಿದ್ದ ಕಾರಿನಲ್ಲಿ 1.47 ಕೋಟಿ ಪೊಲೀಸರ ಕೈ ಸೇರಿದ್ದು, ಹಣದ ಮೂಲದ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎನ್ನಲಾಗುತ್ತಿದೆ.
ದಾವಣಗೆರೆ ನಗರದ ಕೆ.ಆರ್. ರಸ್ತೆ ಗ್ಯಾಲಕ್ಸಿ ಶಾದಿ ಮಹಲ್ ಬಳಿ ಕರ್ತವ್ಯದಲ್ಲಿದ್ದ ಉತ್ತರ ಸಂಚಾರ ಪೊಲೀಸರು ವಾಹನ ತಪಾಸಣೆ & ಐ ಎಂ.ವಿ ಪ್ರಕರಣ ದಾಖಲಿಸುವಾಗ ಅನುಮಾನಾಸ್ಪದವಾಗಿ ಕಂಡು ಬಂದ ವಾಹನವನ್ನು ತಡೆದು ತಪಾಸಣೆ ಮಾಡಿದ್ದಾರೆ. ಈ ವೇಳೆ ಕಾರಿನಲ್ಲಿದ್ದ 3 ಬ್ಯಾಗ್ ಗಳಲ್ಲಿ ಹಣವು ಕಂಡುಬಂದಿದ್ದು , ಹಣದ ಬಗ್ಗೆ ದಾಖಲೆ ಕೇಳಿದಾಗ ಕಾರಿನಲ್ಲಿದ್ದವರು ಸರಿಯಾದ ಮಾಹಿತಿ ನೀಡಿಲ್ಲ.ಈ ಬಗ್ಗೆ ತನಿಖೆ ಮಾಡಿದ ಪೊಲೀಸರು ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ, ಹೆಚ್ವಿನ ವಿಚಾರಣೆಗಾಗಿ ಅಜಾದ್ ನಗರ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ.
ಕಾರಿನಲ್ಲಿದ್ದ ಬ್ಯಾಗ್ ಗಳಲ್ಲಿ 1 ಕೋಟಿ 47 ಲಕ್ಷ ರೂಪಾಯಿಗಳ ಇದ್ದು ಶ್ರೀಕಾಂತ್, ಮಹೇಶ್, ಬಿರಲಿಂಗ, ಎಂಬುವರನ್ನು ವಶಕ್ಕೆ ಪಡೆದಿದ್ದಾರೆ. ಕಲಬುರಗಿಯಿಂದ ದಾವಣಗೆರೆಗೆ ಅಕ್ರಮವಾಗಿ ಹಣ ಸಾಗಿಸುತ್ತಿತ್ತು ಎನ್ನಲಾಗುತ್ತಿದ್ದು, ಸರಿಯಾದ ದಾಖಲೆಗಳು ಇಲ್ಲದ ಕಾರಣ ಮುಂದಿನ ಕ್ರಮಕ್ಕಾಗಿ ತೆರಿಗೆ ಇಲಾಖೆಗೆ ಪ್ರಕರಣ ವರ್ಗಾಯಿಸಲಾಗಿದೆ.