ದಾವಣಗೆರೆ: ಬೈಕ್, ಎತ್ತಿನ ಗಾಡಿ, ಟ್ರಾಕ್ಟರ್ ನಲ್ಲಿ ಅಕ್ರಮವಾಗಿ ಮರಳು ತಪ್ಪಲ್ಲ ಎಂದು ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ.
ಭಾನುವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಹೊನ್ನಾಳಿ ತಾಲ್ಲೂಕಿನ ತುಂಗಡನ ನದಿ ಪಾತ್ರದಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಬೈಕ್, ಎತ್ತಿನ ಗಾಡಿ, ಟ್ರಾಕ್ಟರ್ ನಲ್ಲಿ ಅಕ್ರಮವಾಗಿ ಮರಳು ಸಾಗಿಸ್ತಿದ್ದಾರೆ. ಈ ಹಿನ್ನಲೆ ಪೊಲೀಸರು ದಾಳಿ ನಡೆಸಿ ಮರಳು ದಂದೆ ಕೋರರ ಟ್ರಾಕ್ಟರ್ ಜಪ್ತಿ ಮಾಡಿದ್ದರು. ಈಗಾ ಇದೇ ವಿಚಾರಕ್ಕೆ ರೇಣುಕಾಚಾರ್ಯ ಆಕ್ರೋಶ ಗೊಂಡಿದ್ದಾರೆ. 10 ವೀಲ್, 8 ವೀಲ್ ಗಳಲ್ಲಿ ಮರಳು ಸಾಗಿಸಿದ್ರೆ ತಪ್ಪು, ಅದರಲ್ಲು ಬೇರೆ ಜಿಲ್ಲೆಗಳಲ್ಲಿ ಅಕ್ರಮವಾಗಿ ಮರಳು ಸಾಗಿಸಿದ್ರೆ ತಪ್ಪು ತಾಲ್ಲೂಕಿನಾದ್ಯಂತ ಬೈಕ್, ಬಂಡಿ ಟ್ರಾಕ್ಟರ್ ಮರಳು ಸಾಗಿಸಿದ್ರೆ ಗಪ್ಪೇ ಎಂದು ಮಾಧ್ಯಮದವರನ್ನೆ ಪ್ರಶ್ನಿಸಿದ್ದಾರೆ. ಅಲ್ಲದೆ ಈ ಬಗ್ಗೆ ಗಣಿ ಸಚಿವರೊಂದಿಗೆ ಚರ್ಚಿಸಿ ಮರಳು ಅಕ್ರಮ ಸಕ್ರಮವನ್ನು ತರ್ತೆವೆ. ನನ್ ವಿರುದ್ದ ಸುದ್ದಿ ಮಾಡ್ತಿರ ಮಾಡಿ ಡೋಟ್ ಕೇರ್ ಎಂದಿದ್ದಾರೆ. ಶಾಸಕರ ಈ ಮಾತಿನಿಂದ ಅಕ್ರಮ ಮರಳು ದಂದೆ ಕೋರರ ಹಿಂದೆ ಶಾಸಕ ರೇಣುಕಾಚಾರ್ಯ ಅವರು ಬೆನ್ನೆಲುಬಾಗಿ ನಿಂತಿದ್ದಾರೆ ಎನ್ನುವ ಅನುಮಾನ ಮೂಡಿದೆ.