ದಾವಣಗೆರೆಯಲ್ಲಿ ಮರಳುಗಾರಿಕೆ ನಡೆಸುವವರಿಗೆ ಬೆದರಿಕೆ ಹಾಕುವುದು ಹಾಗೂ ತಿಂಗಳು ಮಾಮೂಲಿ ವಸೂಲಿ ಮಾಡುತ್ತಿರುವುದು ಗೊತ್ತಾಗಿದೆ. ಹೀಗಾಗಿ ಯಾರೇ ಬಂದು ದೂರು ಕೊಟ್ಟರೂ ಮುಲಾಜಿಲ್ಲದೇ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿಬಿ ರಿಷ್ಯಂತ್ ಹೇಳಿದ್ದಾರೆ.
ಅಕ್ರಮ ಮರಳು ದಂಧೆಕೋರರು, ಹಫ್ತಾ ವಸೂಲಿ ಮಾಡುವವರು. ತಿಂಗಳು ಮಾಮೂಲು ಪಡೆಯುವವರು ಹಾಗೂ ರೌಡಿಸಂ ಮಾಡುವವರಿಗೆ ರಿಷ್ಯಂತ್ ಖಡಕ್ ವಾರ್ನಿಂಗ್ ನೀಡಿದ್ದಾರೆ. ಎಷ್ಟೇ ಪ್ರಭಾವಿಗಳಿದ್ದರೂ ಹೆಡೆಮುರಿ ಕಟ್ಟುತ್ತೇವೆ ಎಂದು ಹೇಳಿದ್ದಾರೆ. ಈಗಾಗಲೇ ಒಂದು ಕೋಟಿ 25 ಲಕ್ಷ ರೂಪಾಯಿ ವಸೂಲಿ ಮಾಡಲಾಗಿದೆ. ಇದನ್ನು ಓದಿ :- ಮುಂದಿನ ಎರಡು ದಿನಗಳ ಕಾಲ ದಕ್ಷಿಣ ಒಳನಾಡಿನಲ್ಲಿ ಮಳೆಯಾಗೋ ಸಾಧ್ಯತೆ..!
ಮೈಸೂರು ಇಮ್ರಾನ್ ಸಿದ್ದಿಕಿ ಬಳಿ ಸುಮಾರು 75 ಲಕ್ಷ ರೂಪಾಯಿ ವಶಪಡಿಸಿಕೊಂಡಿದ್ದೇವೆ. ಆತನ ಬಳಿ ಎರಡು ಬೆಂಜ್ ಕಾರುಗಳಿವೆ. ಆದ್ರೆ ಕೃತ್ಯಕ್ಕೆ ಬಳಸಿಲ್ಲ. ಐಷಾರಾಮಿ ಜೀವನ ನಡೆಸುತ್ತಿದ್ದ. ಯಾರೇ ಆದರೂ ಕಾನೂನು ವಿರೋಧಿ ಕೃತ್ಯ ಎಸಗಿದರೆ ಕಠಿಣ ಕ್ರಮ ಖಚಿತ ಎಂದು ರಿಷ್ಯಂತ್ ತಿಳಿಸಿದ್ದಾರೆ. ಇದನ್ನು ಓದಿ :- ಪಿಎಸ್ಐ ಪರೀಕ್ಷೆ ಅಕ್ರಮವನ್ನು ಪೊಲೀಸರೇ ಹೊರತಂದಿದ್ದಾರೆ – ಹೆಚ್.ಡಿ ಕುಮಾರಸ್ವಾಮಿ