ಭಾರತದ ಕುಸ್ತಿಪಟು ದೀಪಕ್ ಪೂನಿಯಾ ಮುನ್ನಡೆ ಸಾಧಿಸಿದ್ದರೂ ಕೊನೆಯ ಸೆಕೆಂಡ್ ನಲ್ಲಿ ಎದುರಾಳಿಗೆ ಮಹತ್ವದ ಅಂಕ ಬಿಟ್ಟುಕೊಟ್ಟು ಟೋಕಿಯೊ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆಲ್ಲುವ ಅವಕಾಶ ಕೈ ಚೆಲ್ಲಿದರು.
ರವಿ ಕುಮಾರ್ ದಾಹಿಯಾ 57 ಕೆಜಿ ವಿಭಾಗದ ಫೈನಲ್ ಪಂದ್ಯದ ಬೆನ್ನಲ್ಲೇ ನಡೆದ 86 ಕೆಜಿ ವಿಭಾಗದ ಫ್ರೀಸ್ಟೈಲ್ ನಲ್ಲಿ ದೀಪಕ್ ಪೂನಿಯಾ ಕೂಡ ಸೋಲುಂಡು ಭಾರತಕ್ಕೆ ಮತ್ತೊಂದು ಪದಕ ತಂದುಕೊಡುವ ಅವಕಾಶದಿಂದ ವಂಚಿತರಾದರು.
ದೀಪಕ್ ಪೂನಿಯಾ 2-1ರಿಂದ ಮುನ್ನಡೆ ಸಾಧಿಸಿದ್ದರೂ ಅಂತಿಮ ಸುತ್ತಿನಲ್ಲಿ ಮೈಲೆಸ್ ನಜೀಮ್ ಅಮಿನೆ ವಿರುದ್ಧ 2-4ರಿಂದ ಆಘಾತ ಅನುಭವಿಸಿದರು.