5ಜಿ ತರಂಗಾಂತರ ಕುರಿತು ಬಾಲಿವುಡ್ ನಟಿ ಜೂಹಿ ಚಾವ್ಲಾ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ದೆಹಲಿ ಹೈಕೋರ್ಟ್, 20 ಲಕ್ಷ ರೂ. ದಂಡ ವಿಧಿಸಿದೆ.
ಜೂಹಿ ಚಾವ್ಲಾ ಅವರು ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆಯದೇ ನೇರವಾಗಿ ನ್ಯಾಯಾಲಯವನ್ನು ಸಂಪರ್ಕಿಸಿದ್ದಾರೆ. ತಮ್ಮ ಅನುಮಾನಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯಲು ಯತ್ನಿಸಿ ಅವರಿಂದ ಉತ್ತರ ಬಾರದೇ ಇದ್ದಿದ್ದರೆ ನಮ್ಮನ್ನು ಸಂಪರ್ಕಿಸಬೇಕಿತ್ತು. ಈ ಅರ್ಜಿಯ ಹಿಂದೆ ಪ್ರಚಾರ ಗಿಮಿಕ್ ಅಲ್ಲದೇ ಮತ್ತೇನೂ ಇಲ್ಲ ಎಂದು ನ್ಯಾಯಾಲಯ ಜ್ಯೂಹಿ ಚಾವ್ಲಾ ಅವರಿಗೆ ಛೀಮಾರಿ ಹಾಕಿತ್ತು.
ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ವೀಡಿಯೋ ಬಿಡುಗಡೆ ಮಾಡಿದ ಜ್ಯೂಹಿ ಚಾವ್ಲಾ, ಇತ್ತೀಚಿನ ಕೆಲವು ದಿನಗಳಲ್ಲಿ ತುಂಬಾ ಶಬ್ಧಗಳು ಕೇಳಿ ಬಂದವು. ಇದರಿಂದ ನಾನು ಯಾವ ಸಂದೇಶ ತಲುಪಿಸಬೇಕು ಎಂದು ಭಾವಿಸಿದ್ದೆನೋ ಅದು ಆಗಲಿಲ್ಲ ಎಂದು ಹೇಳಿದ್ದಾರೆ.
ನಾವು 5ಜಿ ವಿರುದ್ಧವಿಲ್ಲ. ಬದಲಿಗೆ ನಾವು ಅದನ್ನು ಸ್ವಾಗತಿಸುತ್ತೇವೆ. ಆದರೆ ನಾವು ಅಧಿಕಾರಿಗಳಿಂದ ಬಯಸಿದ್ದು 5ಜಿ ತರಂಗಾಂತರ ಸುರಕ್ಷಿತವೇ ಎಂಬುದು ಎಂದು ಸ್ಪಷ್ಟಪಡಿಸಿದ್ದಾರೆ.