1993ರ ಮುಂಬೈ ಬಾಂಬ್ ಸ್ಫೋಟ ಮಾದರಿಯಲ್ಲಿ ಏಕಕಾಲದಲ್ಲಿ ಹಲವು ಕಡೆ ಬಾಂಬ್ ಸ್ಫೋಟಿಸುವ ನಡೆಸಲು ಸಂಚು ರೂಪಿಸಿದ್ದ ಉಗ್ರರ ಗುಂಪನ್ನು ಪತ್ತೆ ಹಚ್ಚಿರುವ ದೆಹಲಿ ಪೊಲೀಸರು ಪತ್ತೆ ಹಚ್ಚಿ ಸಂಚನ್ನು ವಿಫಲಗೊಳಿಸಿದ್ದಾರೆ.
ಮಂಗಳವಾರ ಬಂಧಿಸಲಾದ 6 ಉಗ್ರರನ್ನು ವಿಚಾರಣೆಗೊಳಪಡಿಸಿದಾಗ ದೇಶದಲ್ಲಿ ಹಲವು ಕಡೆ ಏಕಕಾಲದಲ್ಲಿ ಬಾಂಬ್ ಸ್ಫೋಟಿಸುವ ಸಂಚನ್ನು ರೂಪಿಸಿದ್ದನ್ನು ಬಹಿರಂಗಪಡಿಸಿದ್ದಾರೆ.
ದಾಳಿಯ ವೇಳೆ ದೆಹಲಿ ಪೊಲೀಸರು 1.5 ಕೆಜಿ ಆರ್ ಡಿಎಕ್ಸ್ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದು, ವಿಚರಣೆ ವೇಳೆ ದಾಳಿಗೆ ಸಹಕರಿಸುತ್ತಿರುವ ಸ್ಲೀಪಿಂಗ್ ಉಗ್ರರ ಹೆಸರುಗಳನ್ನು ಬಹಿರಂಗಪಡಿಸಿದ್ದಾರೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.