ರೈತರನ್ನು ತಡೆಯಲು ಸೇತುವೆ ನಿರ್ಮಿಸಿ : ಕೇಂದ್ರದ ಕಾಲೇಳೆದ ರಾಹುಲ್

ನವದೆಹಲಿ : ಕೇಂದ್ರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರ ಪ್ರತಿಭಟನೆ ಹತ್ತಿಕ್ಕಲು ತಡೆಗೋಡೆ ಬೇಡ, ಸೇತುವೆ ನಿರ್ಮಿಸುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರದ ಕಾಲೇಳೆದಿದ್ದಾರೆ
ಪಟ್ಟು ಬಿಡದೇ ರೈತರು ಪ್ರತಿಭಟನೆ ನಡೆಸುತ್ತಿದ್ದು, ಪ್ರತಿಭಟನಾನಿರತರು ದೆಹಲಿ ಪ್ರವೇಶಿಸದಂತೆ ರಸ್ತೆ ಅಗೆದು ಸಿಮೆಂಟ್ ಗ್ರಿಲ್ ಗಳನ್ನಿಟ್ಟು ತಡಗೋಡೆ ನಿರ್ಮಿಸಲಾಗುತ್ತಿದೆ. ಇದರ ವಿರುದ್ಧ ಟ್ವೀಟ್ ಮೂಲಕ ಧ್ವನಿ ಏತ್ತಿರುವ ಅವರು ರೈತರನ್ನು ತಡೆಯಲು ಸಿಮೆಂಟ್ ಗೋಡೆಯಲ್ಲ, ಸೇತುವೆ ನಿರ್ಮಿಸಿ ಎಂದು ವ್ಯಂಗ್ಯ ಮಾಡಿದ್ದಾರೆ.
ದೆಹಲಿಯ ಸಿಂಘು, ಟಕ್ರಿ ಹಾಗೂ ಗಾಜೀಪುರ ಗಡಿಯಲ್ಲಿ ಪ್ರತಿಭಟನಾ ರೈತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ. ರಸ್ತೆಗಳನ್ನು ಅಗೆದು ಸಿಮೆಂಟ್, ಗ್ರಿಲ್ ಹಾಕುವ ಮೂಲಕ ತಡೆ ಗೋಡೆಗಳನ್ನು ನಿರ್ಮಿಸಿ, ಬ್ಯಾರಿಕೇಡ್ ಗಳನ್ನು ಇರಿಸಲಾಗಿದೆ. ಇದನ್ನು ಖಂಡಿಸಿ ರಾಹುಲ್ ಗಾಂಧಿ ರೈತ ಹೋರಾಟ ಪರ ಧ್ವನಿ ಏತ್ತಿದ್ದಾರೆ.