ಲೋಕಸಭಾ ಸದಸ್ಯರಿಗೆ ಛೀಮಾರಿ ಹಾಕಿದ ಸಭಾಪತಿ

ನವದೆಹಲಿ: ಲೋಕಸಭೆ ಕಲಾಪ ನಡೆಯುವ ಸಮಯದಲ್ಲಿ ಸಂಸದರು ತಮ್ಮ ಮೊಬೈಲ್ ಪೋನ್ ನಲ್ಲಿ ರೆಕಾರ್ಡ್ ಮಾಡಿಕೊಳ್ಳುವಂತ ಸಂಸದರಿಗೆ ಇಂದು ರಾಜ್ಯಸಭಾ ಸಭಾಪತಿ ಎಂ.ವೆಂಕಯ್ಯ ನಾಯ್ಡು ತರಾಟೆ ತೆಗೆದುಕೊಂಡರು.
ಸದನದಲ್ಲಿ ಕಲಾಪ ನಡೆಯುತ್ತಿರುವ ವೇಳೆ ಇಂತಹ ಅನುಚಿತ ವರ್ತನೆ ಮತ್ತು ಚಟುವಟಿಕೆಗಳು ಸಂಸದೀಯ ಶಿಷ್ಟಾಚಾರಗಳಿಗೆ ವಿರುದ್ಧವಾಗುತ್ತದೆ. ರಾಜ್ಯಸಭೆ ಕೊಠಡಿಯೊಳಗೆ ಮೊಬೈಲ್ ಫೋನ್ ಬಳಸುವುದಕ್ಕೆ ನಿರ್ಬಂಧವಿರುತ್ತದೆ. ಆದರೆ ಕೆಲವು ಸದಸ್ಯರು ಸದನದ ಕಲಾಪಗಳನ್ನು ರೆಕಾರ್ಡ್ ಮಾಡಿಕೊಳ್ಳಲು ಮೊಬೈಲ್ ಬಳಸುತ್ತಾರೆ. ಸದನದೊಳಗೆ ಕುಳಿತುಕೊಂಡು ಅಂತಹ ನಡವಳಿಕೆ ತೋರುವುದು ಸಂಸತ್ತಿನ ಘಟನೆ, ಶಿಷ್ಠಾಚಾರಗಳಿಗೆ ವಿರುದ್ಧವಾಗುತ್ತದೆ ಎಂದು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಂದು ಸೋಷಿಯಲ್ ಮೀಡಿಯಾಗಳ ಪ್ರಭಾವ ವೇಗವಾಗಿದೆ. ಹೀಗೆ ರೆಕಾರ್ಡ್ ಮಾಡಿಕೊಂಡ ಕಲಾಪಗಳು ಬಹಳ ಬೇಗನೆ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತವೆ. ಆಗ ಅದು ಸದನದ ಸದಸ್ಯರಿಗೆ ಸಿಗುವ ಸವಲತ್ತುಗಳ ದುರ್ಬಳಕೆ ಮತ್ತು ಸದನವನ್ನು ನಿಂದಿಸಿದಂತಾಗುತ್ತದೆ ಎಂದು ವೆಂಕಯ್ಯ ನಾಯ್ಡು ಆಕ್ಷೇಪ ವ್ಯಕ್ತಪಡಿಸಿದರು.