ವಿದೇಶಿಗರಿಂದ ಚಹಾ – ಯೋಗಕ್ಕೆ ಮಸಿ ಬಳಿಯುವ ಹುನ್ನಾರ : ನರೇಂದ್ರ ಮೋದಿ ಆರೋಪ

ಸೋನಿತ್ಪುರ : ಭಾರತೀಯ ಸಂಸ್ಕೃತಿಯ ಭಾಗವಾಗಿರುವ ಚಹಾ ಮತ್ತು ಯೋಗದ ಮೇಲೆ ವಿದೇಶಿಗರು ದಾಳಿ ಮಾಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ದೂರಿದ್ದಾರೆ.
ಅಸ್ಸಾಂನ ಸೋನಿತ್‌ಪುರದಲ್ಲಿ ಮಾತನಾಡಿರುವ ಮೋದಿ ಅವರು, ಸ್ವೀಡಿಶ್ ಹೋರಾಟಗಾರ್ತಿ ಗ್ರೆಟಾ ಥನ್ಬರ್ಗ್ ಟ್ವೀಟ್ ಮಾಡಿದ್ದ ವಿವಾದಿತ ಟೂಲ್‌ಕಿಟ್ ಬಗ್ಗೆ ಇದೇ ಮೊದಲ ಬಾರಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರತದ ಹೆಸರಿಗೆ ಮಸಿ ಬಳಿಯುವುದಕ್ಕಾಗಿ ಹೊಂಚು ಹಾಕುತ್ತಿರುವ ಜಾಗತಿಕ ಸಂಚುಕೋರರು ನಮ್ಮ ಚಹಾ, ಯೋಗವನ್ನೂ ಬಿಟ್ಟಿಲ್ಲ. ವಿದೇಶಗರ ಈ ಕೃತ್ಯವನ್ನು ಚಹಾ ತೋಟದ ಕಾರ್ಮಿಕರು ಸಹಿಸಿಕೊಳ್ಳಲಾರರು. ಅವರು ಖಂಡಿತ ಇದಕ್ಕೆ ತಕ್ಕ ಉತ್ತರ ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿವಾದಿತ ಟೂಲ್‌ಕಿಟ್‌ನಲ್ಲಿ ನಮ್ಮ ಚಹಾ, ಯೋಗಾ ವಿರುದ್ಧವೂ ಅಪಪ್ರಚಾರ ಮಾಡುವ ಸಂಚಿತ್ತು ಎನ್ನುವುದನ್ನು ದಿಲ್ಲಿ ಪೊಲೀಸರು ಇತ್ತೀಚೆಗಷ್ಟೇ ಹೇಳಿದ್ದರು ಎಂದು ಗ್ರೆಟಾ ಹೆಸರು ಪ್ರಸ್ತಾವಿಸದೆಯೇ ಭಾರತೀಯ ಸಂಸ್ಕೃತಿಯೊಂದಿಗೆ ತಳುಕು ಹಾಕಿಕೊಂಡಿರುವ ಚಹಾಕ್ಕೂ ಕಪ್ಪು ಮಸಿ ಬಳಿಯಲು ಪಿತೂರಿ ನಡೆದಿದೆ. ಭಾರತೀಯ ಚಹಾದಲ್ಲಿ ಕೀಟನಾಶಕದ ಅಂಶ ಅಧಿಕವಿದೆ ಎಂದು ಗ್ರೀನ್‌ಪೀಸ್ ಎನ್ಜಿಒ ಇತ್ತೀಚೆಗೆ ಮಾಡಿದ್ದ ಆರೋಪಕ್ಕೂ ಪ್ರಧಾನಿ ಈ ಮಾತುಗಳಿಂದ ತಿರುಗೇಟು ನೀಡಿದಂತಾಗಿದೆ.