ಕೋವಿಶೀಲ್ಡ್ ಅಥವಾ ಕೋವ್ಯಾಕ್ಸಿನ್ ಲಸಿಕೆ ತೆಗೆದುಕೊಂಡರೂ ರೂಪಾಂತರಿ ಡೆಲ್ಟಾ ಕೊರೊನಾ ವೈರಸ್ ಕಾಡಲಿದೆ ಎಂದು ದೆಹಲಿಯ ಏಮ್ಸ್ ವೈದ್ಯರು ಆತಂಕಕಾರಿ ವಿಷಯವನ್ನು ಬಹಿರಂಗಪಡಿಸಿದ್ದಾರೆ.
ಕಳೆದ ವರ್ಷ ಅಕ್ಟೋಬರ್ ನಲ್ಲಿ ಭಾರತದಲ್ಲಿ ಮೊದಲ ಬಾರಿ ಪತ್ತೆಯಾದ ರೂಪಾಂತರಿ ಡೆಲ್ಟಾ ಕೊರೊನಾ ಸೋಂಕು ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆ ಹಾಕಿಸಿಕೊಂಡಿದ್ದರೂ ದೇಹಕ್ಕೆ ಸೋಂಕು ತಗುಲಬಲ್ಲದು ಎಂದು ಹೇಳಿದ್ದಾರೆ.
ಬ್ರಿಟನ್ ನಲ್ಲಿ ಮೊದಲ ಬಾರಿ ಪತ್ತೆಯಾದ ರೂಪಾಂತರಿ ಅಲ್ಫಾ ಕೊರೊನಾ ಸೋಂಕಿಗಿಂತ ಡೆಲ್ಟಾ ಸೋಂಕು 40ರಿಂದ 50 ಪಟ್ಟು ಹೆಚ್ಚು ಅಪಾಯಕಾರಿಯಾಗಿದೆ. ಈ ಸೋಂಕಿನಿಂದ ದೇಶದಲ್ಲಿ ಹೆಚ್ಚು ಸಾವು-ನೋವುಗಳು ಸಂಭವಿಸಿವೆ ಎಂದು ಏನಮ್ಸ್ ವೈದ್ಯರ ಸಂಶೋಧನೆಯಲ್ಲಿ ಪತ್ತೆಯಾಗಿದೆ. ಆದರೆ ಈ ಬಗ್ಗೆ ಇನ್ನಷ್ಟೇ ಮರುಸಂಶೋಧನೆಯಲ್ಲಿ ದೃಢಪಡಬೇಕಿದೆ.
63 ಜನರ ಪೈಕಿ 53 ಮಂದಿಗೆ ಕನಿಷ್ಠ ಒಂದು ಕೋವ್ಯಾಕ್ಸಿನ್ ಡೋಜ್ ನೀಡಲಾಗಿತ್ತು. ಉಳಿದವರಿಗೆ ಕನಿಷ್ಠ ಒಂದು ಡೋಜ್ ಕೋವಿಶೀಲ್ಡ್ ನೀಡಲಾಗಿತ್ತು. 36 ಮಂದಿಗೆ 2 ಡೋಜ್ ಲಸಿಕೆಗಳನ್ನು ನೀಡಲಾಗಿತ್ತು. ಇದರಲ್ಲಿ ಶೇ.76.9 ಮಂದಿಯಲ್ಲಿ ಡೆಲ್ಟಾ ಕೊರೊನಾ ವೈರಸ್ ಕಾಣಿಸಿಕೊಂಡಿದೆ ಎಂದು ವೈದ್ಯರು ವಿವರಿಸಿದ್ದಾರೆ.