ಅತ್ಯಂತ ವೇಗವಾಗಿ ಹರಡುವ ಕೊರೊನಾದ ರೂಪಾಂತರಿ ತಳಿ ಡೆಲ್ಟಾ ವೈರಸ್ ಇದೀಗ 135 ರಾಷ್ಟ್ರಗಳಿಗೆ ಹಬ್ಬಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೆಳಿದೆ.
ಡಬ್ಲ್ಯೂಎಚ್ ಒ ಸಂಸ್ಥೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ 135 ದೇಶಗಳಲ್ಲಿ ಡೆಲ್ಟಾ ವೈರಸ್ ಹಬ್ಬಿದ್ದರೆ, 81 ರಾಷ್ಟ್ರಗಳಲ್ಲಿ ಗಾಮಾ ರೂಪಾಂತರಿ ಕೊರೊನಾ ಹಬ್ಬಿದೆ. ಒಂದು ವಾರದಲ್ಲಿ ಸುಮಾರು 200 ದಶಲಕ್ಷ ಜನರು ಸೋಂಕಿಗೆ ಗುರಿಯಾಗಬಹುದು ಎಂದು ಹೇಳಿದೆ.
ಆಲ್ಫಾ ವೈರಸ್ ಈಗಾಗಲೇ 182 ದೇಶಗಳಲ್ಲಿ ವ್ಯಾಪಿಸಿದೆ. ಭಾರತದಲ್ಲಿ ಮೊದಲ ಬಾರಿ ಪತ್ತೆಯಾದ ಡೆಲ್ಟಾ ವೈರಸ್ ಹಲವಾರು ದೇಶಗಳಿಗೆ ವ್ಯಾಪಿಸಿದ್ದು, ಇದು ಮತ್ತಷ್ಟು ವಿಸ್ತರಿಸುವ ಸಾಧ್ಯತೆ ಇದೆ ಎಂದು ಹೇಳಿದೆ.