ಬೆಂಗಳೂರಿನಲ್ಲಿ ವಾಹನ ಸವಾರರಿಗೆ ಗುಡ್ ನ್ಯೂಸ್ (GOOD NEWS ) ಸಿಕ್ಕಿದೆ. ಬೆಂಗಳೂರಿನಲ್ಲಿ ದಾಖಲೆ ಪರಿಶೀಲನೆಗೆ ಇನ್ಮುಂದೆ ಟ್ರಾಫಿಕ್ (TRAFFIC ) ಪೊಲೀಸರು ಗಾಡಿಯನ್ನು ನಿಲ್ಲಿಸಬಾರದು.
ಕೇವಲ ಟ್ರಾಫಿಕ್ ರೂಲ್ಸ್ ಉಲ್ಲಂಘಿಸಿದವರ ವಾಹನಗಳನ್ನು ಮಾತ್ರ ಸ್ಟಾಪ್ ಮಾಡುವಂತೆ ಟ್ರಾಫಿಕ್ ಪೊಲೀಸರಿಗೆ ಖುದ್ದು ಡಿಜಿ & ಐಜಿಪಿ ಪ್ರವೀಣ್ ಸೂದ್ (PRAVEEN SOOD ) ಸೂಚನೆ ನೀಡಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು ನಗರದಲ್ಲಿ ವಾಹನಗಳ ತಡೆದು ಪರಿಶೀಲನೆ ಬಗ್ಗೆ ಸಾರ್ವಜನಿಕರಿಂದ ದೂರು ಕೇಳಿ ಬಂದಿದೆ. ರಸ್ತೆಯಲ್ಲಿ ಬರುವ ವಾಹನಗಳನ್ನು ಸುಖಾಸುಮ್ಮನೆ ತಡೆದು ವಾಹನಗಳ ಪರಿಶೀಲನೆ ನಡೆಸುವಂತಿಲ್ಲ. ಇದನ್ನೂ ಓದಿ : – ಬೆಂಗಳೂರಿನ ಪ್ರಯಾಣಿಕರಿಗೆ ತಟ್ಟಲಿದೆ ಡೀಸೆಲ್ ಕೊರತೆ ಬಿಸಿ – ಬಸ್ ಸಂಚಾರದಲ್ಲಿ ಇಂದು ವ್ಯತ್ಯಯ ಸಾಧ್ಯತೆ
ಡ್ರಿಂಕ್ ಆಂಡ್ ಡ್ರೈವ್ ಮಾಡುವ ವಾಹನಗಳಿಗೆ ಮಾತ್ರ ತಪಾಸಣೆ ನಡೆಸಿ. ಕಣ್ಣಿಗೆ ಕಾಣುವಂತೆ ರೂಲ್ಸ್ ಬ್ರೇಕ್ ಮಾಡುವಂತಹ ವಾಹನಗಳನ್ನು ತಡೆದು ಪರಶೀಲಿಸಿ ಎಂದು ನಗರದ ಪೊಲೀಸ್ ಕಮೀಷನರ್ ಹಾಗೂ ಟ್ರಾಫಿಕ್ ಜಂಟಿ ಆಯುಕ್ತರನ್ನು ಟ್ಯಾಗ್ ಮಾಡಿ ಡಿಜಿಪಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ : – ಇಂದಿನಿಂದ SSLC ಪೂರಕ ಪರೀಕ್ಷೆ