ಕಾಲಿವುಡ್ ಸ್ಟಾರ್ ನಟ ಧನುಷ್ ಮತ್ತೆ ಸುದ್ದಿಯಲ್ಲಿದ್ದಾರೆ. ನಟನ ತಂದೆ ತಾಯಿ ಯಾರು ಎಂಬ ವಿಚಾರ ಭಾರೀ ಚರ್ಚೆಗೆ ಕಾರಣವಾಗಿದೆ. ಧನುಷ್ ನಮ್ಮ ಮಗ ಎಂದು ವೃದ್ಧ ದಂಪತಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಈ ವಿಚಾರವಾಗಿ, ಮದ್ರಾಸ್ ಹೈಕೋರ್ಟ್ ಧನುಷ್ ಗೆ ಸಮನ್ಸ್ ನೀಡಿದೆ. ಧನುಷ್ ನಮ್ಮ ಮಗ ಎಂದು ಕತೀರೇಸನ್ ಮತ್ತು ಮೀನಾಕ್ಷಿ ದಂಪತಿ ಹೇಳಿದ್ದಾರೆ. ಕಳೆದ ಆರು ವರ್ಷಗಳ ಹಿಂದೆ ಮದುರೈ ಜಿಲ್ಲೆಯ ಮೆಲೂರ್ ಮ್ಯಾಜಿಸ್ಟ್ರೇಟ್ ಕೋರ್ಟ್ಗೆ ಈ ಕುರಿತು ಅರ್ಜಿ ಸಲ್ಲಿಸಿದ್ದಾರೆ. ತಮ್ಮ ಜೀವನ ನಿರ್ವಹಣೆಗೆ ಮಗ ಧನುಷ್ ಪ್ರತಿ ತಿಂಗಳು 65 ಸಾವಿರ ಕೊಡಬೇಕೆಂದು ಮನವಿ ಸಲ್ಲಿಸಿದ್ದಾರೆ. ಇದನ್ನೂ ಓದಿ :- ಕಾಪು ಮಾರಿಗುಡಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಾಲಿವುಡ್ ನಟಿ ಪೂಜಾ ಹೆಗ್ಡೆ
ಈ ಪ್ರಕರಣ ಕಳೆದ 6 ವರ್ಷಗಳಿಂದ ಸಾಗುತ್ತಿದೆ. ಕತಿರೇಸನ್ ಮತ್ತು ಮೀನಾಕ್ಷಿ ದಂಪತಿಗೆ ಧನುಷ್ ಮೂರನೇ ಮಗನಾಗಿದ್ದು, ನಟನಾಗುವ ಇಚ್ಛೆಯಿಂದ ಮನೆಯಿಂದ ಪರಾರಿಯಾಗಿದ್ದಾನೆ. ನಾವೇ ಅವನ ನಿಜವಾದ ತಂದೆ ತಾಯಿ. ಇದಕ್ಕೆ ಜನನ ಪ್ರಮಾಣ ಪತ್ರ ಮತ್ತು ಎಸ್ಎಸ್ಎಲ್ಸಿ ಮೆಮೋಗಳನ್ನು ಸಾಕ್ಷಿಯಾಗಿ ನೀಡಿದ್ದಾರೆ. ಇನ್ನು ಈ ಬಗ್ಗೆ ಪಿತೃತ್ವ ಪರೀಕ್ಷೆ ಮಾಡಬೇಕು ಎಂದು ಡಿಮ್ಯಾಂಡ್ ಮಾಡಲಾಗಿತ್ತು. ಆದರೆ ಕೋರ್ಟ್ ಆದೇಶದ ಬಳಿಕ ಇದರಲ್ಲಿ ಸತ್ಯಾಂಶವಿಲ್ಲ ಎಂಬುದು ದೃಢಪಟ್ಟಿತ್ತು. 2020ರಲ್ಲಿ ಈ ಕೇಸ್ ಅನ್ನು ರದ್ದು ಮಾಡಲಾಗಿತ್ತು. ಇದೀಗ ಈ ಆದೇಶವನ್ನು ರದ್ದು ಮಾಡಬೇಕೆಂದು ವೃದ್ಧ ದಂಪತಿ ಕೋರ್ಟ್ ಮೆಟ್ಟಿಲೇರಿದ್ದಾರೆ.
ಇದನ್ನೂ ಓದಿ :- ಈಜುಕೊಳದಲ್ಲಿ ಬಿಕಿನಿತೊಟ್ಟ ಪ್ರಿಯಾಂಕಾ ಚೋಪ್ರಾ ಕೂಲ್ ಕೂಲ್