ಹುಬ್ಬಳ್ಳಿ : ಕಳೆದ ತಿಂಗಳು ಧಾರವಾಡದ ಇಟಿಗಟ್ಟಿ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತ ಪಟ್ಟ ಹನ್ನೆರಡು ಜನ ಕುಟುಂಬಸ್ಥರು ಹಾಗೂ ಪ್ರಜ್ಞಾವಂತ ನಾಗಕರಿಕರಿಂದ ಅಪಘಾತ ನಡೆದ ಸ್ಥಳದಲ್ಲಿ ಶ್ರದ್ಧಾಂಜಲಿ ಕಾರ್ಯ ಹಮ್ಮಿಕೊಳ್ಳಲಾಗಿದೆ.
ಶನಿವಾರ ಬೆಳಿಗ್ಗೆ ಡಾವಣಗೇರಿಯಿಂದ ಹೊರಟು, ಧಾರವಾಡದ ಇಟಿಗಟ್ಟಿ ಬಳಿ ಆಗಮಿಸಿ ಅಪಘಾತ ನಡೆದ ಸ್ಥಳದಲ್ಲಿ ಮೊದಲು ಮೃತ ಕುಟುಂಸ್ಥರಿಗೆ ಶ್ರದ್ಧಾಂಜಲಿ ಸಲ್ಲಿಸಿ ನಂತರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ.
ಮೃತರ ಕುಟುಂಬಸ್ಥರು ತಮ್ಮ ಕುಟುಂಬಕ್ಕೆ ಆದ ನೋವು ಮತ್ತೊಂದು ಕುಟುಂಬಕ್ಕೆ ಆಗದಿರಲಿ ಎಂದು ಅಪಘಾತ ನಡೆದ ಸ್ಥಳದಲ್ಲಿ ಸಂಚಾರದಲ್ಲಿ ಮುಂಜಾಗ್ರತೆ ವಹಿಸುವಂತೆ ಜನರಲ್ಲಿ ಜಾಗೃತಿ ಮೂಡಿಸಲಿದ್ದಾರೆ. ನಂತರ ಧಾರವಾಡ ಜಿಲ್ಲಾಧಿಕಾರಿಗಳ ಕಛೇರಿಗೆ ತೆರಳಿ ಹೈವೆ ಅಗಲೀಕರಣ ಮಾಡುವಂತೆ ಒತ್ತಾಯಿಸಿ ಮನವಿ ಸಲ್ಲಿಸಲಿದ್ದಾರೆ.
ಡಾವಣಗೇರಿಯ ಹನ್ನೆರಡು ಜನರನ್ನು ಕಳೆದುಕೊಂಡ ಕುಟುಂಬಸ್ಥರು ಇಂದು ಮಾಡಲು ಹೊರಟಿರುವ ಸಮಾಜಮುಖಿ ಕಾರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಮ್ಮ ಕುಟುಂಬದ ಆಧಾರ ಸ್ಥಂಬಗಳನ್ನೇ ಕಳೆದುಕೊಂಡಿದ್ದಾರೆ. ಆದರೆ, ತಮಗೆ ಆದ ನೋವು ಬೇರೊಬ್ಬರ ಕುಟುಂಬಕ್ಕೆ ಬಾರದಂತೆ ಜನರಲ್ಲಿ ಜಾಗೃತಿ ಮೂಡಿಸುವ ಜೊತೆಗೆ ಸರಕಾರದ ಗಮನ ಸೇಳೆಯುತ್ತಿರುವ ಆ ಕುಟುಂಬಸ್ಥರ ಹೃದಯ ಶ್ರೀಮಂತಿಕೆಯನ್ನು ಜನ ಮೆಚ್ಚಿದ್ದಾರೆ. ಜೊತೆಗೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಹುಬ್ಬಳ್ಳಿ-ಧಾರವಾಡದ ಜನತೆ ಪಾಲ್ಗೊಳ್ಳುಗುವ ಮೂಲಕ ಮೃತ ಕುಟುಂಬಸ್ಥರಿಗೆ ಆತ್ಮ ಸ್ಥರ್ಯ ತುಂಬಲಿದ್ದಾರೆ.