ಇಂದಿರಾ ಕ್ಯಾಂಟೀನ್‌ಗೆ ರಾಜ್ಯ ಸರ್ಕಾರ ಅನುದಾನ ಸ್ಥಗಿತಗೊಳಿಸಿದೆ. ಈ ಮೂಲಕ ಬಡವರಿಗೆ ರಿಯಾಯಿತಿ ದರದಲ್ಲಿ ದೊರಕುತ್ತಿದ್ದ ಊಟಕ್ಕೂ ಕಲ್ಲು ಹಾಕಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇಂದಿರಾ ಕ್ಯಾಂಟೀನ್ ಕಾಂಗ್ರೆಸ್‌ನ ಕೊಡುಗೆ ಎನ್ನುವ ಕಾರಣಕ್ಕೆ ಅನುದಾನ ನಿಲ್ಲಿಸಿದ್ದೀರಾ?
ಅಥವಾ ಬಡವರ ಮೇಲೆ ನಿಷ್ಕಾಳಜಿಯಿಂದ ಅನುದಾನ ಸ್ಥಗಿತಗೊಳಿಸಿದಿರೋ? ಎಂದು
ಸಿಎಂ ಬೊಮ್ಮಾಯಿಗೆ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರಶ್ನೆ ಮಾಡಿಮಾಡಿದ್ದಾರೆ.
ರಾಜಕೀಯ ದುರುದ್ದೇಶದಿಂದ ರಾಜ್ಯ ಸರ್ಕಾರ ಕ್ಯಾಂಟೀನ್‌ಗೆ ಅನುದಾನ ಸ್ಥಗಿತಗೊಳಿಸಿರುವುದು ಹೀನ ಬುದ್ದಿ. ಈ ಸರ್ಕಾರಕ್ಕೆ ಬಡವರ ಮೇಲೆ ನೈಜ ಕಾಳಜಿಯಿದ್ದರೆ ಇಂದಿರಾ ಕ್ಯಾಂಟೀನ್‌ಗೆ ಅನುದಾನ ನೀಡಲಿ ಎಂದು ಟ್ವೀಟ್ ಮೂಲಕ ದಿನೇಶ್ ಗುಂಡೂರಾವ್ ಆಗ್ರಹಿಸಿದ್ದಾರೆ.
0 57 Less than a minute