ಕರ್ನಾಟಕ ರಾಜ್ಯಕ್ಕೆ ಎಷ್ಟು ಯೋಜನೆಗಳನ್ನು ತರಬೇಕು ಎಂಬ ಬಗ್ಗೆ ಮುಖ್ಯಮಂತ್ರಿ ಬೊಮ್ಮಯಿ ಅವರ ಜೊತೆ ಚರ್ಚೆ:ಕೇಂದ್ರ ಸಚಿವ ಭಗವಂತ ಖೂಭ ಕೇಂದ್ರ ರಾಸಾಯನಿಕ ರಸಗೊಬ್ಬರ ಖಾತೆ ಸಚಿವ ಭಗವಂತ ಖೂಬ ತಿಳಿಸಿದ್ದಾರೆ.
ನೆಲಮಂಗಲದಲ್ಲಿ ಸೋಮವಾರ ಬಿಜೆಪಿಯ ರಾಜ್ಯ ಪ್ರಕೋಷ್ಠ ವತಿಯಿಂದ ಆಯೋಜಿಸಿದ್ದ ಕೇಂದ್ರ ಹಾಗೂ ರಾಜ್ಯದ ಮಹತ್ವಾಕಾಂಕ್ಷಿ ಯೋಜನೆ ಫಲಾನುಭವಿಗಳಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಕರ್ನಾಟಕಕ್ಕೆ ಅನುದಾನ ತರಲು ಆದ್ಯತೆ ನೀಡಿ ಸರ್ವತೋಮುಖ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.
ಭಾರತೀಯ ಜನತಾ ಪಕ್ಷದಲ್ಲಿ ನಾವು ಇಷ್ಟುದಿನದಿಂದ ದುಡಿದರೂ ನಾವು ಕೇಳಿದ ಹುದ್ದೆ ನಮಗೆ ಸಿಗಲಿಲ್ಲ ಎಂದು ನಾವು ಎಂದು ಬೇಜಾರು ಪಟ್ಟಿಕೊಳ್ಳಬಾರದು. ಏಕೆಂದರೆ ಜನತಾ ಪಕ್ಷವು ನಾವು ನಿರೀಕ್ಷೆ ಮಾಡಿದ ಹುದ್ದೆಯನ್ನು ನಮ್ಮ ಕೆಲಸ ಕಾರ್ಯದಿಂದ ಗುರಿತಿಸಿ ಕರೆದುಕೊಡುತ್ತದೆ. ಅಲ್ಲಿಯವರೆಗೂ ನಾವು ತಾಳ್ಮೆಯಿಂದ ಕಾಯಬೇಕು ಎಂದರು.
ಪ್ರಮುಖ ಹುದ್ದೆ ಕೊಡುವ ಪಕ್ಷವು ಯಾವದಾದರೂ ಇದ್ದರೆ ಅದು ಭಾರತೀಯ ಜನತಾ ಪಕ್ಷ ಎಂದು ನಾನು ಹೆಮ್ಮೆಯಿಂದ ಹೇಳುತ್ತೇನೆ. 21 ವರ್ಷದಿಂದ ಪಕ್ಷದಲ್ಲಿ ದುಡಿದ ಅನುಭವದ ಮಾತುಗಳನ್ನು ನಿಮಗೆ ಹೇಳುತ್ತಿದ್ದೇನೆ ಎಂದು ಮೆಲುಕು ಹಾಕಿದರು.
ದೇಶಕ್ಕೋಸ್ಕರ ವಿಚಾರ ಮಾಡುವುದು. ದೇಶದ ದೇಶಕೋಸ್ಕರ ಪ್ರಾಣ ಕೊಡುವುದು ಮತ್ತು ಸರ್ವ ಜಾತಿ ಧರ್ಮದವರನ್ನು ದೇಶದಲ್ಲಿ ಭಾತೃತ್ವ ಭಾವನೆಯನ್ನು ಮೂಡಿಸುವುದು ಯಾವುದಾದರೂ ಪಕ್ಷ ಅಂತೇನಾದರೂ ಭಾರತದಲ್ಲಿದ್ದರೆ ಇದ್ದರೆ ಅದು ಭಾರತೀಯ ಜನತಾ ಪಕ್ಷ ಎಂದು ಹೇಳಿದರು.
ಸಾಮಾನ್ಯ ಕಾರ್ಯಕರ್ತರು ನಮ್ಮ ಭಾಗ್ಯ ಎಂದು ಭಾವಿಸಬೇಕು ಎಂದು ಹೇಳಿದ ಅವರು ಭಾತರದಲ್ಲಿ ಅನೇಕ ಪಕ್ಷಗಳನ್ನು ನೋಡಿದ್ದೇವೆ ಕುಟುಂಬ ರಾಜಕಾರಣ, ಜಾತಿ ರಾಜಕಾರಣ ಮಾಡಿ ಸಮಾಜವನ್ನು ಒಡೆಯುವ ಕೆಲಸ ಮಾಡಿದ್ದಾರೆ ಎಂದು ಅವರು ನುಡಿದರು.