ಬೆಂಗಳೂರಿನ ಕೋರಮಂಗಲ ಬಳಿ ಮಂಗಳವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಡಿಎಂಕೆ ನಾಯಕನ ಪುತ್ರ ಸೇರಿದಂತೆ ಕನಿಷ್ಠ 7 ಮಂದಿ ಮೃತಪಟ್ಟಿದ್ದಾರೆ.
ಕೋರಮಂಗಲದ ಮಂಗಳ ಕಲ್ಯಾಣ ಮಂಟಪದ ಬಳಿಯ ಫುಟ್ ಪಾತ್ ಮೇಲಿನ ಕಂಬಕ್ಕೆ ಆಡಿ ಕಾರು ಡಿಕ್ಕಿ ಹೊಡೆದಿದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ನಜ್ಜುಗುಜ್ಜಾಗಿದ್ದು ಮೂವರು ಮಹಿಳೆಯರು ಸೇರಿದಂತೆ 7 ಮಂದಿ ಅಸುನೀಗಿದ್ದಾರೆ.
ಹೊಸೂರಿನ ಡಿಎಂಕೆ ಶಾಸಕ ವೈ ಪ್ರಕಾಶ್ ಅವರ ಪುತ್ರ ಕರುಣಾ ಸಾಗರ್, ಪತ್ನಿ ಬಿಂದು (28), ಇಶಿತಾ (21), ಡಾ.ಧನುಶಾ (21), ಕೇರಳ ಮೂಲದ ಅಕ್ಷಯ್ ಗೋಯೆಲ್ (23), ಹರಿಯಾಣ ಮೂಲದ ಉತ್ಸವ್ (23) ಮತ್ತು ಹುಬ್ಬಳ್ಳಿಯ ರೋಹಿತ್ (23) ಮೃತ ದುರ್ದೈವಿಗಳು.