ಚಿಕ್ಕಬಳ್ಳಾಪು : ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಅವರ ಬದಲಾವಣೆ ಇಲ್ಲ. ರಾಜ್ಯದಲ್ಲಿ ಕೋವಿಡ್ ಸಂಕಷ್ಟ ನಿರ್ವಹಣೆ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಉತ್ತಮ ಕೆಲಸ ಮಾಡಿದ್ದಾರೆ ಎಂದು ಸಂಸದ ಬಿ ಎನ್ ಬಚ್ಚೇಗೌಡ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೈಕಮಾಂಡ್ ಹೇಳಿದರೆ ರಾಜೀನಾಮೆ ಕೊಡುತ್ತೇನೆ ಅಂತ ಯಡಿಯೂರಪ್ಪನವರು ಹೇಳಿರಬಹುದು.
ಹೈಕಮಾಂಡ್ ಏನು ನಿರ್ಧಾರ ತೆಗೆದುಕೊಳ್ಳುತ್ತೆ ಅದಕ್ಕೆ ನಾವೆಲ್ಲ ಬದ್ದರಾಗಿರಬೇಕು. ಆ ನಿಟ್ಟಿನಲ್ಲಿ ಬಿಎಸ್ ವೈ ಹೇಳಿದ್ದಾರೆ ಎಂದರು.
ಈ ವಿಷಯದಲ್ಲಿ ಸಚಿವ ಸಿಪಿ ಯೋಗೇಶ್ವರ್. ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಮಾಧ್ಯಮಗಳ ಮುಂದೆ ಮಾತನಾಡಿರಬಹುದು. ನಾನೂ ಪಕ್ಷದಲ್ಲಿ ಹಿರಿಯ ಇದ್ದೇನೆ ಇಂತಹ ರಾಜಕೀಯ ಪ್ರಸಂಗಗಳನ್ನು ನೋಡಿದ್ದೇನೆ ಎಂದು ತಿಳಿಸಿದರು.
ಒಬ್ಬ ಮುಖ್ಯಮಂತ್ರಿಯನ್ನು ತೆಗೆಯುವುದು ಕೂರಿಸುವುದು ಅಷ್ಟು ಸುಲಭವಲ್ಲ. ರಾಜ್ಯದಲ್ಲಿ ಮುಖ್ಯಮಂತ್ರಿಯನ್ನು ತೆಗೆಯುವ ಪ್ರಶ್ನೆಯೇ ಇಲ್ಲ. ಯಾಕೆ ತೆಗೆಯಬೇಕು? ವಿಜಯೇಂದ್ರ ಹಸ್ತಕ್ಷೇಪ ಮಾಡಿರಬಹುದು, ಯಾರ ಮಕ್ಕಳು ಮಾಡುವುದಿಲ್ಲ ಹೇಳಿ, ಅಧಿಕಾರದಲ್ಲಿದ್ದಾಗ ಅದು ಸರ್ವೇಸಾಮನ್ಯ ಎಂದು ಬಿಎಸ್ವೈ ಪರ ಬ್ಯಾಟಿಂಗ್ ಬೀಸಿದರು.