60 ವರ್ಷದ ವೃದ್ಧರೊಬ್ಬರ ದೇಹದಿಂದ ಕ್ರಿಕೆಟ್ ಬಾಲ್ ಗಾತ್ರದ ಬ್ಲ್ಯಾಕ್ ಫಂಗಸ್ ಗಡ್ಡೆಯನ್ನು ಬಿಹಾರದ ವೈದ್ಯರು ಯಶಸ್ವಿಯಾಗಿ ಹೊರತೆಗೆದಿದ್ದಾರೆ.
ಬಿಹಾರದ ರಾಜಧಾನಿ ಪಾಟ್ನಾದಲ್ಲಿರುವ ಇಂದಿರಾ ಗಾಂಧಿ ಇನ್ಸಿಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಸುಮಾರು ಮೂರೂವರೆ ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಯಶಸ್ವಿಯಾಗಿ ಬ್ಲ್ಯಾಕ್ ಫಂಗಸ್ ಗಡ್ಡೆಯನ್ನು ತೆಗೆದಿದ್ದಾರೆ.
ಜಾಮುಯಿ ಪ್ರದೇಶದ 60 ವರ್ಷದ ವೃದ್ಧ ಅನಿಲ್ ಕುಮಾರ್ ಅವರ ಆರೋಗ್ಯ ಶಸ್ತ್ರಚಿಕಿತ್ಸೆ ನಂತರ ಸ್ಥಿರವಾಗಿದ್ದು, ಅವರ ಆರೋಗ್ಯದ ಬಗ್ಗೆ ನಿಗಾ ವಹಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಅನಿಲ್ ಕುಮಾರ್ ಕೊರೊನಾ ಸೋಂಕಿನಿಂದ ಚೇತರಿಸಿಕೊಂಡಿದ್ದರು. ಆದರೆ ನಂತರ ಬ್ಲ್ಯಾಕ್ ಫಂಗಸ್ ಪತ್ತೆಯಾಗಿತ್ತು.
ಅನಿಲ್ ಕುಮಾರ್ ಅವರಿಗೆ ಮೂಗಿನಿಂದ ಮೆದುಳಿನವರೆಗೆ ಬ್ಲ್ಯಾಕ್ ಫಂಗಸ್ ವ್ಯಾಪಿಸಿತ್ತು. ಆದರೆ ಕಣ್ಣಿಗೆ ಹರಡಿರಲಿಲ್ಲ. ಇದರಿಂದ ಕಣ್ಣಿಗೆ ಯಾವುದೇ ಹಾನಿಯಾಗಿಲ್ಲ ಎಂದು ಶಸ್ತ್ರಚಿಕಿತ್ಸೆ ನೇತೃತ್ವ ವಹಿಸಿದ್ದ ಡಾ.ಮನೀಶ್ ಮಂಡಲ್ ತಿಳಿಸಿದ್ದಾರೆ.