ಧಾರವಾಡ: ಹಿಂದೂ ಸಂಪ್ರದಾಯದಲ್ಲಿ ಮೊದಲ ಬಾರಿಗೆ ಗರ್ಭವತಿ ಮಹಿಳೆಯರಿಗೆ ಸೀಮಂತ ಕಾರ್ಯ ಮಾಡೋದನ್ನ ನೋಡಿದ್ದೆವೆ. ಅದ್ರೆ ಪೇಡಾ ನಗರಿ ಧಾರವಾಡದಲ್ಲೊಂದು ನಡೆದ ಅಪರೂಪದ ಸೀಮಂತ ಕಾರ್ಯವು ಅಚ್ಚರಿ ಮೂಡಿಸಿದೆ.
ನಗರದಲ್ಲೊಂದು ಕುಟುಂಬ ಸಾಕಿದ್ದ ಶ್ವಾನ ಗರ್ಭಧರಿಸಿದನ್ನ ಕಂಡು ಮನೆಯವರೆಲ್ಲ ಸೇರಿ ಅದಕ್ಕೆ ಸೀಮಂತ ಕಾರ್ಯಕ್ರಮ ಮಾಡಿದ್ದಾರೆ. ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿ ಸಂಶಿ ಗ್ರಾಮದಲ್ಲಿ ಇಂತಹದೊಂದು ಕಾರ್ಯ ಅಚ್ಚರಿ ಘಟನೆಗೆ ಕಾರಣವಾಗಿದೆ. ಸಂಶಿ ಗ್ರಾಮದ ಸಾರಿಗೆ ನೌಕರ ರಮೇಶ ಪಡೇತರ ಮನೆಯಲ್ಲಿ ಇಂತಹ ವಿಷೇಶವಾದ ಕಾರ್ಯಕ್ರಮ ನಡೆದಿದೆ.
ಕಳೆದ ವರ್ಷ ಇವರು ತಮ್ಮ ಮನೆಗೆ ಶ್ವಾನವೊಂದನ್ನ ತೆಗೆದುಕೊಂಡು ಬಂದಿದ್ದಾರೆ, ಅದಕ್ಕೆ ಲೂಸಿ ಎಂದು ನಾಮಕರಣ ಮಾಡಿದ್ದಾರೆ. ನಂತರ ಅದು ಗರ್ಭಧರಿಸಿದೆ ಇದನ್ನ ಕಂಡು ಮನೆಯವರೆಲ್ಲಾ ಅದಕ್ಕೆ ಮನೆಯಲ್ಲಿನ ಮಹಿಳೆಯರಿಗೆ ಮಾಡುವಂತೆ ಅದಕ್ಕೂ ಸಹ ಅದ್ಧೂರಿ ಸೀಮಂತ ಕಾರ್ಯಕ್ರಮ ಮಾಡಿದ್ದಾರೆ.
ಶ್ವಾನ ಲೂಸಿಗೆ ಬಳೆಹಾಕಿ, ಸೀರೆ ಉಡಿಸಿ, ಹೂವಿನಹಾರ ಹಾಕಿ, ಮೊದಲ ಬಾರಿಗೆ ಗರ್ಭಧರಿಸಿದ ಶ್ವಾನಕ್ಕೆ ಬಡಾವಣೆಯ ಅಕ್ಕಪಕ್ಕದ ನಿವಾಸಿಗಳೆಲ್ಲಾ ಸೇರಿ ಸೀಮಂತ ಕಾರ್ಯಕ್ರಮ ಮಾಡಿ ಖಷಿಪಟ್ಟಿದ್ದಾರೆ.