ವಿಶ್ವ ಪ್ರಸಿದ್ಧ ಧಾರ್ಮಿಕ ಸ್ಥಳ, ಶ್ರೀ ವೆಂಕಟೇಶ್ವರ ಸ್ವಾಮೀಯ ಟಿಟಿಡಿ ಟ್ರಸ್ಟ್ ಗೆ ಮಾಜಿ ಶಾಸಕ, ಉದ್ಯಮಿ ನಾರಾ ಸೂರ್ಯನಾರಾಯಣ ರೆಡ್ಡಿ ಅವರು, 1 ಕೋಟಿ ರೂ.ದೇಣಿಗೆ ನೀಡಿ ಭಕ್ತಿ ಸಮರ್ಪಿಸಿದರು.
ಶನಿವಾರ ಕುಟುಂಬದ ಸದಸ್ಯರು, ಬೆಂಬಲಿಗರೊಂದಿಗೆ ಶ್ರೀ ಕ್ಷೇತ್ರ ತಿರುಮಲಕ್ಕೆ ತೆರಳಿ ಶ್ರೀವೆಂಕಟೇಶ್ವರ ಸ್ವಾಮೀ ದರ್ಶನ ಪಡೆದು ವಿಶೇಷ ಪೂಜೆ, ಅರ್ಚನೆ ಸಲ್ಲಿಸಿದರು. ನಂತರ ಟಿಟಿಡಿ ಟ್ರಸ್ಟ್ ನ ಮುಖ್ಯಸ್ಥರಿಗೆ 1ಕೋಟಿ ರೂ.ಚೆಕ್ ನ್ನು ಹಸ್ತಾಂತರಿಸಿ ಭಕ್ತಿ ಸಮರ್ಪಿಸಿದರು.
ಕೇವಲ ಹಣವಿದ್ದರೆ ಸಾಲದು ಕಷ್ಟದಲ್ಲಿರುವವರಿಗೆ ನೆರವಾಗುವುದು, ದೇಗುಲದ ಅಭಿವೃದ್ಧಿಗೆ ದೇಣಿಗೆ ನೀಡಿ ಭಕ್ತಿ ಸಮರ್ಪಿಸುವ ಗುಣವಿರಬೇಕು ಎನ್ನುವದಕ್ಕೆ ಮಾಜಿ ಶಾಸಕರು ಸಾಕ್ಷೀಯಾಗಿದ್ದಾರೆ. ಹಿಂದಿನಿಂದಲೂ ಅವರು ಜಿಲ್ಲೆಯಷ್ಟೇ ಅಲ್ಲ, ಕಷ್ಟದಲ್ಲಿರುವ ಯಾರೇ, ಯಾವುದೇ ಮೂಲೆಯಿಂದ ಬಂದರೂ ಕೈಲಾದಷ್ಟು ಸಹಾಯ ಮಾಡಿ, ಕಷ್ಟ ಸುಖಗಳಿಗೆ ಸ್ಪಂಧಿಸುವ ಸ್ವಭಾವ ಇವರದ್ದಾಗಿದೆ. ಕ್ರೂರಿ ಕೊರೋನಾ ಸಂಕಷ್ಟದಲ್ಲಿ ಸಾಕಷ್ಟು ಜನ ಬಡವರಿಗೆ, ಕಾರ್ಮಿಕರಿಗೆ ಆಹಾರ ಧಾನ್ಯಗಳ ಕಿಟ್ ಸೇರಿದಂತೆ ನಾನಾ ರೀತಿಯ ನೆರವಾಗುವ ಮೂಲಕ ಗಮನಸೆಳೆದಿದ್ದಾರೆ. ನಂತರ ಟಿಟಿಡಿ ದೇಗುಲ ಟ್ರಸ್ಟ್‌ನ ಮುಖ್ಯಸ್ಥರು, ಮಾಜಿ ಶಾಸಕ ಸೂರ್ಯನಾರಾಯಣ ರೆಡ್ಡಿ ಅವರನ್ನು ಸನ್ಮಾನಿಸಿ, ಗೌರವಿಸಿದರು.