ಸಾಂಬರ್ ಮಾಡಿಲ್ಲ ಅಂತ ತಾಯಿಯನ್ನೇ ಕೊಂದ ಮಗ!

ಊಟಕ್ಕೆ ಸಾಂಬಾರ್ ಮಾಡಿಲ್ಲ ಎಂದು ಆಕ್ರೋಶಗೊಂಡ ಮಗ ಕುಡಿದ ಅಮಿಲಿನಲ್ಲಿ ತಾಯಿಯನ್ನೆ ಕೊಲೆ ಮಾಡಿದ ಘಟನೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಪಟ್ಟಣದಲ್ಲಿ ನಡೆದಿದೆ.

ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ರತ್ನಮ್ಮ‌ (45) ಕೊಲೆಯಾದ ಮಹಿಳೆ. 22 ವರ್ಷದ ಲೋಕೇಶ್ ತಾಯಿಯನ್ನೇ ಕೊಂದ ಪುತ್ರ.

20 ವರ್ಷಗಳ ಹಿಂದೆ ಪಿಲ್ಲಲ ಹಳ್ಳಿ ಗ್ರಾಮದಲ್ಲಿ ಗೋವಿಂದಪ್ಪ ಅವರ ಜೊತೆ ವಿವಾಹ ಆಗಿದ್ದ ರತ್ನಮ್ಮ ಗಂಡನನ್ನ ಬಿಟ್ಟು ಮೊಳಕಾಲ್ಮೂರು ಪಟ್ಟಣದಲ್ಲಿ ಕೂಲಿ ಕೆಲಸ ಮಾಡಿಕೊಂಡು ತನ್ನ 22 ವರ್ಷದ ಲೋಕೇಶ ಮಗನೊಂದಿಗೆ ಜೀವನ ಸಾಗಿಸುತ್ತಿದ್ದರು. ಮಗನೂ ಕೂಡ ಕೂಲಿ ಕೆಲಸ ಮಾಡಿಕೊಂಡಿದ್ದು, ಕುಡಿತದ ಚಟಕ್ಕೆ ಬಲಿಯಾಗಿದ್ದ.

ಪ್ರತಿದಿನ ಕುಡಿದು ಮನೆಯಲ್ಲಿ ಜಗಳ ಮಾಡುತ್ತಿದ್ದ ಲೋಕೇಶ ಕಳೆದ ರಾತ್ರಿ ಕೂಡ ಕುಡಿದು ಮನೆಗ ಬಂದಿದ್ದು, ಇದೇ ವೇಳೆ ಕೂಲಿ ಕೆಲಸ ಮುಗಿಸಿಕೊಂಡು ಸುಸ್ತಾಗಿದ್ದ ತಾಯಿ ರತ್ನಮ್ಮ ಅನ್ನ ಮಾಡಿಟ್ಟು ವಿಶ್ರಾಂತಿ ಪಡೆಯುತ್ತಿದ್ದಳು.

ಕುಡಿದ ಅಮಲಿನಲ್ಲಿ ಮನೆಗೆ ಬಂದ ಲೋಕೇಶ ಊಟಕ್ಕೆ ಸಾಂಬರ್ ಮಾಡಿಲ್ಲ ಎಂದು ಆಕ್ರೋಶಗೊಂಡು ತಾಯಿಯ ಜೊತೆ ಜಗಳ ಶುರು ಮಾಡಿದ್ದು, ಕುಡಿದ ಅಮಲಿನಲ್ಲಿ ತಾಯಿಯ ಕೆನ್ನೆಗೆ ರಭಸವಾಗಿ ಹೊಡೆದಿದ್ದಾನೆ. ಹೊಡೆತದ ರಭಸಕ್ಕೆ ರತ್ನಮ್ಮ ಮನೆಯ ಕಬ್ಬಿಣದ ಬಾಗಿಲಿಗೆ ಬಿದ್ದಿದ್ದು, ತಲೆ ಬುರುಡೆಯಿಂದ ತೀವ್ರ ರಕ್ತ ಶ್ರಾವ ವಾಗಿ ಸ್ಥಳದಲ್ಲೇ ರತ್ನಮ್ಮ ಮೃತಪಟ್ಟಿದ್ದಾಳೆ.

ವಿಷಯ ತಿಳಿದ ಅಕ್ಕ ಪಕ್ಕದ ಮೆನೆಯವರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಮೊಳಕಾಲ್ಮೂರು ಪೊಲೀಸರು ರತ್ನಮ್ಮನ ಮಗ ಲೋಕೇಶನನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!