
ದಾವಣಗೆರೆ: ದಾವಣಗೆರೆ: ಸಚಿವ ಜಗದೀಶ್ ಶೆಟ್ಟರ್ ಕೈಗಾರಿಕಾ ಇಲಾಖೆ ಎಮ್ ಡಿ ರಾಮ್ ಪ್ರಸಾದ್ ಗೆ ರೈತ ಮುಖಂಡ ಅವಾಜ್ ಹಾಕಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಜಿಲ್ಲಾಧಿಕಾರಿ ಕಚೇರಿಯ ಸಭೆಯಲ್ಲಿ ಏರು ಧ್ವನಿಯಲ್ಲಿ ರೈತ ಮುಖಂಡ ನಾಗರಾಜ್ ಅವಾಜ್ ಹಾಕಿದ್ದಾರೆ. ಹಫೀಜಾ ಎನ್ನುವವರು 2007 ರಲ್ಲಿ ಇಂಡಸ್ಟ್ರಿಯಲ್ ಏರಿಯಾಕ್ಕೆ ಜಮೀನು ನೀಡಿದ್ದರು. ಒಟ್ಟು 12 ಕ್ಕೆ ಎಕರೆ ಭೂಮಿ ನೀಡಿದ್ರು ಈ ವರೆಗೂ ಭೂಮಿ ನೀಡಿದ ಕುಟುಂಬಕ್ಕೆ ಜಿಲ್ಲಾಡಳಿತ 4 ಲಕ್ಷ ಪರಿಹಾರ ನೀಡಿತ್ತು. ಅದ್ರೆ ಹೆಚ್ಚುವರಿ ಪರಿಹಾರದ ಹಣ ಮಾತ್ರ ನೀಡಿರಲಿಲ್ಲ. ಈ ಬಗ್ಗೆ ಸಚಿವ ಜಗದೀಶ್ ಶೆಟ್ಟರ್ ಗೆ ರೈತ ಮುಖಂಡ ನಾಗರಾಜ್ ಮನವಿ ಮಾಡಲು ಮುಂದಾದ್ರು. ಈ ವೇಳೆ ಮಧ್ಯ ಪ್ರವೇಶಿಸಿದ್ದ ಕೈಗಾರಿಕಾ ಇಲಾಖೆ ಎಮ್ ಡಿ ರಾಮ್ ಪ್ರಸಾದ್ ಹೋರಾಟ ಮಾಡಿದ್ರೆ ಪರಿಹಾರ ಸಿಗಲ್ಲ ಎಂದು ರಾಮ್ ಪ್ರಸಾದ್ ಹೆಳಿದಕ್ಕೆ. ಇದರಿಂದ ಅಕ್ರೋಶಗೊಂಡ ರೈತ ಮುಖಂಡ ನಾಗರಾಜ್ ಪರಿಹಾರ ಈಗಲೇ ನಿರ್ಧಾರವಾಗಬೇಕು ಅಂತ ಏರು ಧ್ವನಿಯಲ್ಲಿ ಅವಾಜ್ ಹಾಕಿದ್ದಾಗ ಕೆಲಕಾಲ ಗೊಂದಲ ವಾತವರಣ ಸೃಷ್ಠಿಯಾಗಿತ್ತು.
ಅಧಿಕಾರಿಗಳ ಜನಡುವೆ ಮಾತಿನ ಚಕಮಕಿ..!