ಮದುವೆ ವಿಚಾರಕ್ಕೆ ಮನನೊಂದು ಒಂದೇ ಕುಟುಂಬದ ಮೂವರು ಆತ್ಮಹತ್ಯೆ

ದಾವಣಗೆರೆ : ಚನ್ನಗಿರಿ ತಾಲೂಕಿನ ಸೂಳೆಕೆರೆಯ ತೊಟ್ಟಿಲ್ಲಲ್ಲಿ, ಕ್ಷುಲಕ್ಕ ಕಾರಣಕ್ಕೆ ತಾಯಿ ಮಗ ಹಾಗೂ ಮಗಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸಂಭವಿಸಿದೆ. ಮೂವರ ಮೃತದೇಹಗಳೂ ಪತ್ತೆಯಾಗಿದ್ದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಮೃತರು ಮರವಂಜೆ ಗ್ರಾಮದವರು ಎನ್ನಲಾಗಿದೆ.
ತಾಯಿ ಕಮಲಮ್ಮ, ಮಗಳು ಶೃತಿ ಹಾಗೂ ಸಂಜಯ್ ಮೃತರಾದವರು ಎಂದು ತಿಳಿದುಬಂದಿದೆ. ಘಟನೆಯ ಕುರಿತು ವಿಚಾರಿಸಿದಾಗ ಮದುವೆಯ ವಿಚಾರದ ಮನಸ್ಥಾಪದ ಹಿನ್ನೆಲೆ ಮೂವರೂ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ನಾಲೆಗೆ ಬಿದ್ದ ಮಗಳನ್ನು ರಕ್ಷಿಸಲು ಹೋಗಿ ತಾಯಿ ಮಗ ನೀರು ಪಾಲಾಗಿದ್ದಾರೆ.