ದಾವಣಗೆರೆ: ಜಿಲ್ಲೆಯಲ್ಲಿ ಅಪಘಾತ ತಪ್ಪಿಸಲು ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯಿಂದ ಟ್ರಾಕ್ಟರ್ ಗಳಿಗೆ ರಿಪ್ಲೇಕ್ಟರ್ ಅಳವಡಿಸುವ ವಿನೂತನ ಕಾಯ್ರಕ್ರಮ ಮಾಡಲಾಯಿತು. ವಾಹನ ಚಲಾಯಿಸಬೇಕಾದರೆ ಮೈಯಲ್ಲ ಕಣ್ಣಾಗಿರಬೇಕು ಇಲ್ಲಾವಾದ್ರೆ ಸ್ವಲ್ಪ ಯಾಮಾರಿದ್ರು ನಮ್ಮ ಜೀವ ಶಿವನ ಪಾದ ಸೆರೋದು ಗ್ಯಾರಂಟಿ. ಇಂತಹ ನಿರ್ಲಕ್ಷ್ಯದ ವಾಹನ ಚಾಲನೆಯಿಂದ ಜೀವದ ಬೆಲೆ ಕಡೆಗಣಿಸಿದರೆ ಅವಲಂಬಿತ ಕುಟುಂಬದ ಸದಸ್ಯರ ಜೀವನ ಕಡು ಸಂಕಷ್ಟದಲ್ಲಿ ಮುಳುಗುತ್ತದೆ. ಇದನ್ನರಿತ ಪೊಲೀಸ್ ಇಲಾಖೆ ರಸ್ತೆ ಸುರಕ್ಷತಾ ನಿಯಮಗಳ ಜಾಗೃತಿ ಮೂಡಿಸಲು ಸಾಮಾಜಿಕ ಬೃಹತ್ ಅಭಿಯಾನ ಕೈಗೊಂಡಿದೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಅನೇಕ ಭಾಗಗಲ್ಲಿ ಕಿರಿದಾದ ರಸ್ತೆಗಳಿವೆ. ರಸ್ತೆ ಅಪಘಾತ ತಡೆಯಲು ತಾಲ್ಲೂಕಿನಲ್ಲಿ ಅನೇಕ ಪ್ರಯತ್ನ ನಡೆಸಿದರು ಒಂದಲ್ಲ ಒಂದು ರೀತಿಯಲ್ಲಿ ಅಪಘಾತ ಸಂಭವಿಸುತಲೆ ಇವೆ. ಅದ್ರಲ್ಲು ಈ ದಾರಿಗಳಲ್ಲಿ ಟ್ರಾಕ್ಟರ್ಗಳ ಅಪಘಾತ ಹೆಚ್ಚಾಗಿದೆ. ಇದನ್ನು ಗಮನಿಸಿದ ಪೊಲೀಸ್ ಇಲಾಖೆ ಅಪಘಾತ ತಪ್ಪಿಸಲು ಟ್ರಾಕ್ಟರ್ ಗಳಿಗೆ ರಿಫ್ಲೆಕ್ಟರ್ ಅಳವಡಿಸಲಾಯಿತು.
ಶಾಸಕ ಮಾಡಾಳು ವಿರುಪಾಕ್ಷಪ್ಪ ಅವರ ಕಾಳಜಿಯಿಂದ 200ಕ್ಕಿಂತ ಹೆಚ್ಚು ಟ್ರ್ಯಾಕ್ಟರ್‌ಗಳನ್ನು ಒಟ್ಟುಗೂಡಿಸಿ, ಉಚಿತ ರಿಫ್ಲೆಕ್ಟರ್‌ಗಳನ್ನು ಅಳವಡಿಸುವ ವ್ಯವಸ್ಥೆ ಕಲ್ಪಿಸಲಾಯಿತು. 200 ಕ್ಕಿಂತ ಹೆಚ್ಚಿನ ಟ್ರಾಕ್ಟರ್ ಗಳಿಗೆ ರಾಜ್ಯದಲ್ಲೆ ಪ್ರಥಮ ಭಾರಿಗೆ ಅಪಘಾತ ತಪ್ಪಿಸುವ ನಿಟ್ಟಿನಲ್ಲಿ ಈ ಅಭಿಯಾನ ನಡೆಸಲಾಗಿದೆ. ಕೇವಲ ಗೂಡ್ಸ್ ಹಾಗೂ ಬಸ್ಸ್ ಗಳಿಗೆ ಮಾತ್ರ ಅಳವಡಿಸುತ್ತಿದ್ದ ರಿಫ್ಲೆಕ್ಟರ್ ಗಳನ್ನ ಇದೀಗ ಟ್ರಾಕ್ಟರ್ ಗಳಿಗೂ ಅಳವಡಿಸಲಾಗುತ್ತಿದೆ. ಈ ಮೂಲಕ ಅಪಘಾತ ತಡೆಯುವ ಪ್ರಯತ್ನ ಮಾಡಲಾಗಿದೆ ಎಂದು ಎಸ್ಐ ಶಿವರುದ್ರಪ್ಪ ಮೇಟಿ ಹೇಳಿದ್ದಾರೆ. ಅಪಘಾತಗಳು ಹೆಚ್ಚಾಗ್ತಿದ್ದ ಅ ತಾಲ್ಲೂಕಿನಲ್ಲಿ, ಅಪಘಾತಗಳನ್ನು ತಡೆಯುವುದರಲ್ಲಿ ಅಲ್ಲಿನ ಪೊಲೀಸರ ವಿಭಿನ್ನ ಪ್ರಯತ್ನ ಫಲ ನೀಡಿದೆ. ಚನ್ನಗಿರಿ ಪೊಲೀಸರ ಪರಿಶ್ರಮದಿಂದ ಅಪಘಾತ ತಪ್ಪಿಸಲು ಟ್ರಾಕ್ಟರ್ ಗಳಿಗೆ ರಿಪ್ಲೇಕ್ಟರ್ ಅಳವಡಿಸಿದ್ದು ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಪೊಲೀಸ್ ಇಲಾಖೆಯಿಂದ ಟ್ರಾಕ್ಟರ್ ಗಳಿಗೆ ರಿಪ್ಲೇಕ್ಟರ್ ಅಳವಡಿಕೆ