ಬೇಡಿದ ವರಗಳ ಕರುಣಿಸುವ ನುಗ್ಗಿಕೇರಿ ವೀರಾಂಜನೇಯ..

ವೀರೇಶ ಬಾರ್ಕಿ
ಧಾರವಾಡ: ಆಂಜನೇಯ ಅಂದರೆ ಭಕ್ತಿಯ ಸಂಕೇತ. ಬ್ರಹ್ಮಚರ್ಯದ ಧ್ಯೋತಕ. ಧೈರ್ಯ, ಸಾಹಸ ಶೌರ್ಯಗಳ ಪ್ರತಿಬಿಂಬ. ಇಂತಹ ಆಂಜನೇಯನನ್ನು ನೆನೆದರೆ ಮನಸ್ಸಿನ ಭಯಗಳು ದೂರ ಆಗುತ್ತವೆ. ಜ್ನಾನ ವೃದ್ದಿಯಾಗುತ್ತದೆ. ನಾವು ನಿಮಗೆ ಇಂತಹ ಆಂಜನೇಯನ ದರ್ಶನದ ಜೊತೆಗೆ ಅ ಸ್ಥಳದ ಪರಿಚಯ ಇಲ್ಲಿದೆ ನೋಡಿ..
ಧಾರವಾಡದ ನುಗ್ಗಿಕೇರಿಯ ಗ್ರಾಮದಲ್ಲಿರೋ ಬಲಭೀಮ ಪ್ರಸನ್ನ ಎಂದೇ ಹೆಸರಾಗಿರೋ ಆಂಜನೇಯನ ಸಾಮಾನ್ಯನಲ್ಲ. ಇವನ ಕಣ್ಣುಗಳಲ್ಲಿ ಸಾಲಿಗ್ರಾಮವಿದೆ. ಈ ಸಾಲಿಗ್ರಾಮ ಶಕ್ತಿಯಿಂದಾಗಿ ನುಗ್ಗಿಕೇರಿ ಆಂಜನೇಯನ ಬಳಿ ಏನು ಬೇಡಿದರು ಈಡೇರುತ್ತದೆ. ಇನ್ನು ಸ್ವಲ್ಪ ಇತಿಹಾಸ ನೋಡೊದಾದ್ರೆ ವ್ಯಾಸರಾಯರಿಂದ ಪ್ರತಿಷ್ಠಾಪಿತವಾದ ನುಗ್ಗಿಕೇರಿ ಆಂಜನೇಯನ ಮಹಿಮೆ, ಅವನ ಶಕ್ತಿ ತಿಳಿದುಕೊಳ್ಳಬೇಕಿದೆ. ಹರಿ ಸರ್ವೋತ್ತಮ, ವಾಯು ಜೀವೋತ್ತಮ. ಇಂತಹದೊಂದು ಸಾಲು ಓದುತ್ತಿದ್ದಂತೆಯೇ ನೆನೆಪಾಗೋದು ಆಂಜನೇಯ. ಧಾರವಾಡ ಜಿಲ್ಲೆಯ ಪ್ರಸಿದ್ದ ಆಂಜನೇಯನ ತಾಣವಾದ ನುಗ್ಗಿಕೇರಿ ಬಲಭೀಮ ಪ್ರಸನ್ನ ಎಂದೇ ಖ್ಯಾತಿಪಡೆದ ಆಂಜನೇಯನ ವಿವಿಧ ಅವತಾರಗಳಿ ಇಲ್ಲಿವೆ. ಸುಂದರವಾದ ಕೆತ್ತನೆಗಳಿರುವ ಬೆಳ್ಳಿಯ ಬಾಗಿಲ ಚೌಕಟ್ಟು. ಇದರೊಳಗೆ ಕೇಸರಿ ಬಣ್ಣದ ಛಾಯೆ. ಅದರೋಳಗೆ ಮೂಡಿ ಬಂದಂತಿರುವ ಆಂಜನೇಯ.
ಪೂರ್ವಾಭಿಮುಖವಾಗಿರೋ ಆಂಜನೇಯ ಮೂರ್ತಿ. ಅಭಯ ಹಸ್ತ ಹೊಂದಿರೋ ಆಂಜನೇಯ. ಹನುಮ, ಭೀಮ, ಮಧ್ವ ಮೂರು ಅವತಾರಗಳನ್ನು ಈ ಆಂಜನೇಯ ಹೊಂದಿದ್ದು, ಕೆಂಪು ಮುಖ, ತಲೆಗೆ ಬೆಳ್ಳಿಯ ಕೀರಿಟ, ಭಕ್ತರಿಗೆ ಹರಸುತ್ತಿರುವ ಅಭಯ ಹಸ್ತ ಹರಳುಗಳಿಂದಲೇ ಅಲಂಕೃತಗೊಂಡಿರೋ ಶರೀರ. ಕುತ್ತಿಗೆಯಲ್ಲಿ ಜಪಮಾಲೆ ಹಾಗೂ ಮೈತುಂಬ ಹಾರಗಳು. ಇದು ನುಗ್ಗಿಕೇರಿಯ ಬಲಭೀಮನ ಸುಂದರ ಸ್ವರೂಪ. ಈ ವಿಗ್ರಹದ ಕೆಳಗೆ ವೀರಾಂಜನೇಯ ಭಂಗಿಯಲ್ಲಿ ಗದೆ ಹೊತ್ತು, ಇನ್ನೊಂದು ಕೈಯಲ್ಲಿ ಸಂಜೀವಿನಿ ಪರ್ವತ ಹೊತ್ತು ನಿಂತಿರುವ ಅಂಜನೇಯ. ಇದು ಪಂಚಲೋಹದ ಮುದ್ದಾದ ಮೂರ್ತಿ, ಕೊರಳಲ್ಲಿ ಲಂಜಭಟ್ಟಲಿನ ಹೂವಿನ ಹಾರ ಧರಸಿ ನಿಂತ ಆಂಜನೇಯ ತನ್ನ ಭಾವಭಂಗಿಯಿಂದಲೇ ಮನಸೆಳೆಯುತ್ತಾನೆ.
ಈ ವೀರಾಂಜನೇಯ ಪವರ್ ಫುಲ್ ಆಂಜನೇಯ. ಇತ ಅಂತಿಂತ ಆಂಜನೇಯನಲ್ಲ. ಚಕ್ರಾಂಕಿತ ಆಂಜನೇಯ. ಇತ ಇರೋದು ಧಾರವಾಡ ಜಿಲ್ಲೆಯ ನುಗ್ಗಿಕೇರಿ ಗ್ರಾಮದಲ್ಲಿ. ಸುಂದರವಾದ ಹಸಿರು ಉಕ್ಕುತ್ತಿರುವ ಪರಿಸರ. ವಿಶಾಲವಾದ ಕೆರೆ. ಕೆರೆ ದಂಡೆಯ ಮೇಲೆ ಪ್ರತಿಷ್ಠಾಪಿಸಿದ್ದಾನೆ. ಇಲ್ಲಿಗೆ ಪ್ರತಿನಿತ್ಯ ಸಾವಿರಾರು ಭಕ್ತ ಸಮೂಹ ಗರುಡಗಂಭಕ್ಕೆ ಊದಿನ ಕಡ್ಡಿ ಹಚ್ಚಿ ನಮಸ್ಕರಿಸುತ್ತಾರೆ. ಅಲ್ಲದೆ ದೇವಾಲಯದ ಗೋಪುರ ಇವೆಲ್ಲಾ ಈ ದೇವಾಲಯದ ಹೊರನೋಟಗಳನ್ನ ಅಕಷಣಿಯವಾಗಿ ಕೆತ್ತೆ ಮಾಡಿದ್ದಾರೆ.
ನುಗ್ಗಿಕೇರಿ ಆಂಜನೇಯನ ದೇವಾಸ್ಥಾನದ ದಾರಿಯಲ್ಲಿ ಪೂಜೆಗೆ ಬೇಕಾದ ಹಣ್ಣು ಕಾಯಿ ಹೂ ಹಾರಗಳು ಸಿಗುತ್ತವೆ. ವ್ಯವಸ್ಥಿತವಾಗಿ ಜೋಡಿಸಿಟ್ಟ ತೆಂಗಿನಕಾಯಿ, ಬಾಳೆಹಣ್ಣು, ಎಕ್ಕಿ ಹೂವಿನ ಮಾಲೆ, ಚೆಂಡು ಹೂವಿನ ಮಾಲೆ ಇವನ್ನು ನೋಡೋದೆ ಕಣ್ಣಿಗೆ ಹಬ್ಬ. ನುಗ್ಗಿಕೇರಿ ಆಂಜನೇಯನ ಕಣ್ಣುಗಳಲ್ಲಿ ವಿಶಿಷ್ಠವಾದ ಸಾಲಿಗ್ರಾಮವಿದೆ. ಆಂಜನೇಯನು ಈ ಸಾಲಿಗ್ರಾಮದಿಂದ ಭಕ್ತರನ್ನು ವಿಕ್ಷೀಸುತ್ತಾನೆ. ಒಂದು ಕಣ್ಣು ಬಲಕ್ಕೆ ವಿಕ್ಷೀಸುತ್ತಿದ್ದರೆ ಇನ್ನೊಂದು ಕಣ್ಣು ಏಡಕ್ಕೆ ವಿಕ್ಷೀಸುತ್ತಿದೆ. ನೀರು ನುಗ್ಗಿ ಬರುವ ಸ್ಥಳವಾಗಿರೋದ್ರಿಂದಲೇ ಈ ಗ್ರಾಮಕ್ಕೆ ನುಗ್ಗಿಕೇರಿ ಅಂತಾ ಕರೆಯಲಾಗುತ್ತದೆಯಂತೆ.
ಇಂತಹ ವಿಶೇಷತೆಯುಳ್ಳ ಆಂಜನೇಯ ಇಲ್ಲಿ ಸ್ಥಾಪನೆಯಾಗಿದ್ದೆ ಕುತೂಹಲದ ಕಥೆ. ಈ ಕ್ಷೇತ್ರವೂ ಇಷ್ಟೊಂದು ಮಹಿಮೆ ಪಡೆಯಲು ಇಬ್ಬರು ಮಹಾಮಹಿಮರೇ ಕಾರಣ. ಆ ಮಹಾಮಹಿಮರು ಯಾರು? ನುಗ್ಗಿಕೇರಿಯ ಆಂಜನೇಯ ಪ್ರತಿಷ್ಠಾಪನೆಯ ಹಿಂದೆ ಇರುವ ಕಥೆ ಯಾವುದು ಅನ್ನೋದನ್ನು ಹೇಳುತ್ತಾರೆ ಸಂತೋಷ ದೇಸಾಯಿ. ಸುಮಾರು 400 ವರ್ಷಗಳ ಹಿಂದೆ ವ್ಯಾಸರಾಯರಿಂದ ಪ್ರತಿಷ್ಠಾಪಣೆಯಾದ ಈ ದೇವಸ್ಥಾವೂ ಇಂದು ಭಕ್ತರ ಪಾಲಿನ ನಂಬಿಕೆಯ ತಾಣವಾಗಿದೆ. ನಿತ್ಯ ಇಲ್ಲಿಗೆ ಬರುವ ಸಾವಿರಾರು ಭಕ್ತರು ಕೇವಲ ದರ್ಶನ ಮಾತ್ರದಿಂದ ಕಷ್ಟದಿಂದ ಪಾರುಗುತ್ತಿದ್ದಾರೆ.
ಇಂತಹ ವಿಶೇಷತೆಯುಳ್ಳ ಆಂಜನೇಯ ಇಲ್ಲಿ ಸ್ಥಾಪನೆಯಾಗಿದ್ದೆ ಕುತೂಹಲದ ಕಥೆ. ಈ ಕ್ಷೇತ್ರವೂ ಇಷ್ಟೊಂದು ಮಹಿಮೆ ಪಡೆಯಲು ಇಬ್ಬರು ಮಹಾಮಹಿಮರೇ ಕಾರಣ. ಆ ಮಹಾಮಹಿಮರು ಯಾರು? ನುಗ್ಗಿಕೇರಿಯ ಆಂಜನೇಯ ಪ್ರತಿಷ್ಠಾಪನೆಯ ಹಿಂದೆ ಇರುವ ಕಥೆ ಯಾವುದು ಅನ್ನೋದನ್ನು ಹೇಳುತ್ತಾರೆ ಸಂತೋಷ ದೇಸಾಯಿ. ಸುಮಾರು 400 ವರ್ಷಗಳ ಹಿಂದೆ ವ್ಯಾಸರಾಯರಿಂದ ಪ್ರತಿಷ್ಠಾಪಣೆಯಾದ ಈ ದೇವಸ್ಥಾವೂ ಇಂದು ಭಕ್ತರ ಪಾಲಿನ ನಂಬಿಕೆಯ ತಾಣವಾಗಿದೆ. ನಿತ್ಯ ಇಲ್ಲಿಗೆ ಬರುವ ಸಾವಿರಾರು ಭಕ್ತರು ಕೇವಲ ದರ್ಶನ ಮಾತ್ರದಿಂದ ಕಷ್ಟದಿಂದ ಪಾರುಗುತ್ತಿದ್ದಾರೆ.ಪುರಾತನ ಕಾಲದ ಈ ನುಗ್ಗಿಕೇರಿ ಆಂಜನೇಯನದ್ದು ನಿಜಕ್ಕೂ ಮಹಾನ್ ಶಕ್ತಿ ಅಂತಾನೆ ಹೇಳಬೇಕು. ಯಾಕಂದ್ರೆ ಇಲ್ಲಿ ಹರಕೆ ಅಂತಾ ಏನು ಮಾಡಬೇಕಾಗಿಲ್ಲ. ಭಕ್ತಿಯಿಂದ ಮನಸಾರೆ ಬೇಡಿಕೊಂಡರೆ ಸಾಕು. ದೇವಸ್ಥಾನದಿಂದ ಮನೆಗೆ ತೆರೆಳುವಷ್ಟರಲ್ಲಿ ನಮ್ಮ ಭೇಡಿಕೆ ಫಲಿಸಿರೋತ್ತೆ. ಇದನ್ನು ಕಂಡುಕೊಂಡಿರುವ ಅಸಂಖ್ಯ ಭಕ್ತರು ಇಲ್ಲಿದ್ದಾರೆ.
ನುಗ್ಗಿಕೇರಿ ಆಂಜನೇಯ ದೇವಸ್ಥಾನ ಸುಂದರವಾದ ಪರಿಸರದಲ್ಲಿದೆ. ಈ ಸ್ಥಳ ಪ್ರಾಕೃತಿಕವಾಗಿ ಸೂಕ್ತವಾದ ವಾಸ್ತು ಹೊಂದಿದೆ. ಕೆಳಗೆ ವಿಶಾಲವಾದ ಕೆರೆ. ಮೇಲೆ ದೇವಸ್ಥಾನ. ಹೀಗೆ ಅತ್ಯಂತ ಶಾಸ್ತ್ರಬದ್ದವಾದ ಸ್ಥಳಗಳಲ್ಲಿ ದೇವಾಲಯವನ್ನು ಸ್ಥಾಪಿಸಿರುವುದು ನಮ್ಮ ಹಿರಿಯರ ಜಾಣ್ಮೆಯನ್ನು ಎತ್ತಿ ತೋರಿಸುತ್ತದೆ. ಬಲಭೀಮ ಪ್ರಸನ್ನ, ಹನುಮಪ್ಪ ಎಂದೆಲ್ಲ ಕರೆಯಿಸಿಕೊಳ್ಳುವ ಈ ಆಂಜನೇಯನ ಖ್ಯಾತಿ ದಿನೇ ದಿನೇ ಬೆಳೆಯುತ್ತಿದೆ. ಅದಕ್ಕೆ ಕಾರಣ ಇಲ್ಲಿ ಭೇಡಿ ಬಂದ ಭಕ್ತರು ಇಷ್ಟಾರ್ಥಗಳು ಈಡೇರುವುದೇಯಾಗಿದೆ. ಭಕ್ತರು ನಿತ್ಯ ನೂರಾರು ಕಷ್ಟಗಳನ್ನು ಇಟ್ಟುಕೊಂಡು ಇಲ್ಲಿಗೆ ಬರುತ್ತಾರೆ. ಭಕ್ತಿಯಿಂದ ಬೇಡಿದರೆ ಅವೆಲ್ಲ ಕೈಗೂಡಿ ಬಿಡುತ್ತವೆ. ಇಲ್ಲಿರುವ ಹನುಮಂತನ ಶಕ್ತಿ ಎಷ್ಟರ ಮಟ್ಟಿಗೆ ಇದೆ ಎಂದರೆ ದೇವಾಲಯದಲ್ಲಿ ಬೇಡಿಕೆ ಇಡುತ್ತಿದ್ದಂತಯೇ ಕೆಲಸ ನೇರವೇರಿಬಿಟ್ಟಿರುತ್ತದೆ ಅನ್ನೋದು ಭಕ್ತರ ಅಭಿಪ್ರಾಯ.
ದೇವಾಲಯದ ಇನ್ನೊಂದು ವಿಶೇಷವನ್ನು ನಿಮಗೆ ಹೇಳಲೇ ಬೇಕು. ಅದೇನು ಅಂದರೆ ಈ ಹನುಮಪ್ಪನ ದೇವಾಲಯಕ್ಕೆ ಎಲ್ಲಾ ಜಾತಿಯ ಜನರು ಬರುತ್ತಾರೆ. ಹಿಂದು, ಮುಸ್ಲೀಂ, ಸಿಖ್ ಹೀಗೆ ಎಲ್ಲಾ ಜಾತಿಯ ಜನರು ಈ ಹನುಮಪ್ಪನ ದರುಶನ ಪಡೆಯುತ್ತಾರೆ. ಈ ದೇವಾಲಯಕ್ಕೆ ಹತ್ತಾರು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಭಕ್ತರಿದ್ದಾರೆ. ಅವರು ಹನುಮಪ್ಪನಲ್ಲಿ ಕೇಳಿಕೊಂಡು ತಮ್ಮ ಅನೇಕೆ ಸಂಕಷ್ಟಗಳಿಗೆ ಪರಿಹಾರ ಕಂಡುಕೊಂಡಿದ್ದಾರೆ. ಈ ಆಂಜನೇಯನ ದರ್ಶನದಿಂದ ಸಂಸಾರದ ಜಂಜಾಟಗಳು ದೂರವಾಗುತ್ತವೆ. ವಿವಾಹವಿಲ್ಲದವರಿಗೆ ವಿವಾಹ. ಶಿಕ್ಷಣ ಬೇಡಿಬರುವವರಿಗೆ ಶಿಕ್ಷಣ ಹೀಗೆ ಎಲ್ಲಾ ತರಹದಲ್ಲೂ ಆಂಜನೇಯ ಭಕ್ತರ ಪಾಲಿನ ಕಾಮಧೇನು ಆಗಿದ್ದಾನೆ.